ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ನುಡಿದಂತೆ ನಡೆದಿದ್ದಾರೆ ಎಂದು ಕೇಂದ್ರ ಸಚಿವಡಿ.ವಿ.ಸದಾನಂದ ಗೌಡಅವರು ಹೇಳಿದ್ದಾರೆ.

ಪಾಕಿಸ್ತಾನದಬಲಾಕೋಟ್ ಸೇರಿದಂತೆ ಪಾಕ್ ಆಕ್ರಮಿತ ಪ್ರದೇಶಗಳಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆ ನಡೆಸಿದದಾಳಿಗೆ ಸಂಬಂಧಿಸಿದಂತೆ ಅವರುಪ್ರತಿಕ್ರಿಯಿಸಿದ್ದಾರೆ.

ಏನು ಮಾಡಬೇಕಿತ್ತೋ ಅದನ್ನು ನಮ್ಮ ಸೇನೆ ಮಾಡಿದೆ.ಯೋಧರ ಒಂದೊಂದು ಹನಿ ರಕ್ತಕ್ಕೂನ್ಯಾಯ ಒದಗಿಸುತ್ತೇನೆಂದು ಪ್ರಧಾನಿ ಹೇಳಿದ್ದರು. ಈ ನಿಟ್ಟಿನಲ್ಲಿ ಸೇನೆದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಮೋದಿ ಅವರು ನುಡಿದಂತೆ ನಡೆದಿದ್ದಾರೆ.ಉಗ್ರ ತರಬೇತಿ ಕೇಂದ್ರಗಳು ಧ್ವಂಸ ಆಗಿವೆ ಎಂದು ತಿಳಿಸಿದ್ದಾರೆ.

ದೇಶದ ಶಕ್ತಿ ಪರೀಕ್ಷೆ ಮಾಡುವ ಪಾಕಿಸ್ತಾನದ ಪ್ರಯತ್ನ ಸಾಧ್ಯವಾಗುವುದಿಲ್ಲ.ಭಾರತ ಎಲ್ಲದಕ್ಕೂ ತಯಾರಾಗಿದೆ.ಆದರೆ ಭಯೋತ್ಪಾದನೆಯನ್ನು ಮಾತ್ರ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೇವೆ ಎಂಬಸಂದೇಶವನ್ನು ಮೋದಿ ಕೊಟ್ಟಿದ್ದಾರೆ.ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ ಎಂದು ಗುಡುಗಿದರು.

ಈ ವಿಚಾರದಲ್ಲಿರಾಜಕೀಯ ಮಾಡುವುದು ಸೂಕ್ತವಲ್ಲ.ಹಿಂದೆ ಯಾರು ಏನು ಮಾಡಿದ್ದರೂ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟುವ ಕೆಲಸ ಆಗಿರಲಿಲ್ಲ.ಸದ್ಯದಕಾಲಘಟ್ಟಕ್ಕೆ ಏನು ಬೇಕೋ ಅದನ್ನು ಮಾಡಿದ್ದೇವೆ.ಕಾಂಗ್ರೆಸ್ ನಾಯಕರಿಗೂ ಪಾಕಿಸ್ತಾನಕ್ಕೂ ಏನು ಸಂಬಂಧವಿದೆಯೋಗೊತ್ತಿಲ್ಲ.ಇದರಲ್ಲಿ ರಾಜಕಾರಣ ಮಾಡುತ್ತಾರೆ ಅಂದರೆ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಪಾಕಿಸ್ತಾನಕ್ಕೆ ಈಗಲೂ ಬುದ್ದಿ ಬರದಿದ್ದರೆ ಯುದ್ಧದ ಹಂತಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.