ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧಿತರಾಗಿರುವ ಸಂಜನಾ ಗಲ್ರಾನಿ ಅಲಿಯಾಸ್ ಅರ್ಚನಾ, 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಮ್ಮ ಹೆಸರನ್ನು ಮಾಹಿರಾ ಎಂದು ಬದಲಾಯಿಸಿಕೊಂಡಿದ್ದಾರೆ.

ಈ ಮತಾಂತರ ದೃಢಪಡಿಸಿ ಟ್ಯಾನರಿ ರಸ್ತೆಯ 'ದಾರುಲ್ ಉಲೂಮ್ ಶಾಹ್ ವಲಿಉಲ್ಲಾ' ಹೊರಡಿಸಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಜನಾ ಅವರ ನೈಜ ಹೆಸರು ಅರ್ಚನಾ. ತಂದೆ ಹೆಸರು ಮನೋಹರ್. ವೈದ್ಯರಾಗಿರುವ ಇಸ್ಲಾಂ ಧರ್ಮದ ಯುವಕರೊಬ್ಬರ ಜತೆ ಮದುವೆ ನಿಶ್ಚಯ ಮಾಡಿಕೊಂಡಿರುವ ಅರ್ಚನಾ, ಅದಕ್ಕೂ ಮುನ್ನವೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ.

'ಹೆಬ್ಬಾಳ ಭುವನೇಶ್ವರಿ ನಗರದ ಅರ್ಚನಾ ಮನೋಹರ್ ಗಲ್ರಾನಿ ಅವರು ಯಾವ ಒತ್ತಡಕ್ಕೂ ಒಳಗಾಗದೇ ಸ್ವಯಂಪ್ರೇರಿತರಾಗಿ ಇಸ್ಲಾಂ ಧರ್ಮಕ್ಕೆ ಸೇರಿದ್ದಾರೆ. ಅವರ ಹೊಸ ಹೆಸರು ಮಾಹಿರಾ’ ಎಂದುದೃಢೀಕರಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

2018ರ ಅಕ್ಟೋಬರ್ 9ರಂದು ಈ ಪತ್ರವನ್ನು ಸಂಜನಾ ಅವರಿಗೆ ನೀಡಲಾಗಿದೆ. ಪತ್ರವನ್ನೇ ಆಧರಿಸಿ ನ್ಯಾಯಾಲಯಕ್ಕೆ ಸಂಜನಾ ಅಫಿಡ್ವಿಟ್ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.