ಬೆಂಗಳೂರು: ‘ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಸೌಲಭ್ಯ ಮುಂದುವರಿಸಬೇಕು’ ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಸಂಘವು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಪರಿಶಿಷ್ಟ ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡಿ ಮೀಸಲಾತಿ ಕಲ್ಪಿಸಬೇಕೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನೇಮಿಸಿದ ಈ ಆಯೋಗಕ್ಕೆ ಸಂಘದ ಕಾರ್ಯಾಧ್ಯಕ್ಷ ಜಂಬೂದ್ವೀಪ ಸಿದ್ದರಾಜು ಈ ಮನವಿ ಸಲ್ಲಿಸಿದ್ದಾರೆ.

‘ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರೂ, ಅವರ ಬೇರುಗಳು ಪರಿಶಿಷ್ಟ ಜಾತಿಯ ಸಂಬಂಧಗಳ ಜೊತೆ ಬೆಸೆದುಕೊಂಡಿದೆ. ಅವರು ಮೂರ್ತಿ ಪೂಜೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದು, ಭಾರತೀಯ ಸಂಪ್ರದಾಯಗಳನ್ನು ಬಿಟ್ಟುಕೊಟ್ಟಿಲ್ಲ. ಅವರನ್ನು ಸಮಾಜದಲ್ಲಿ ಮಾದಿಗ, ಹೊಲೆಯರೆಂದೇ ಗುರುತಿಸಲಾಗುತ್ತಿದೆ. ಆದರೆ, ಇಸ್ಲಾಂ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟರು, ಪರಿಶಿಷ್ಟ ಜಾತಿಯ ಸಂಬಂಧವನ್ನು ಕಡಿದುಕೊಂಡಿರುತ್ತಾರೆ. ಯಾಕೆಂದರೆ, ಮುಸ್ಲಿಂ ಧರ್ಮದ ಕಟ್ಟುಪಾಡುಗಳು ಕಠಿಣವಾಗಿವೆ. ಹೀಗಾಗಿ, ದಲಿತ ಕ್ರೈಸ್ತರು ಪರಿಶಿಷ್ಟ ಮೀಸಲಾತಿಯಲ್ಲಿಯೇ ಮುಂದುವರೆಸಬೇಕು’ ಎಂದು ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.