ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ. ‘ಕಮಲ’ದ ಭದ್ರಕೋಟೆಯಲ್ಲಿ ಈ ಬಾರಿಯಾದರೂ ‘ಕೈ’ ಬಾವುಟ ಹಾರಾಡುತ್ತಾ ಅಥವಾ ಅಪ್ಪನ ಕ್ಷೇತ್ರವನ್ನು ಮಗ ಉಳಿಸಿಕೊಳ್ಳುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿವೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆಯ ಅಪ್ಡೇಟ್:

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಮತ ಎಣಿಕೆಯ13ನೇ ಸುತ್ತು ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಶಿಗ್ಗಾವಿ: 13ನೇ ಸುತ್ತು ಮುಕ್ತಾಯ*

ಕಾಂಗ್ರೆಸ್ಗೆ 9,996 ಮತಗಳ ಮುನ್ನಡೆ.

ಕಾಂಗ್ರೆಸ್ನ ಯಾಸೀರ ಅಹಮದ್ ಖಾನ್ ಪಠಾಣ: 75,780

ಬಿಜೆಪಿಯ ಭರತ್ ಬೊಮ್ಮಾಯಿ : 65,784

ಶೇ 80.72ರಷ್ಟು ಮತದಾನ

ನವೆಂಬರ್ 13ರಂದು ಮತದಾನ ನಡೆದಿದ್ದು, 1.91 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 80.72ರಷ್ಟು ಮತದಾನ ಪ್ರಮಾಣ ದಾಖಲಾಗಿದ್ದು, ಮತದಾರರ ಅಂತಿಮ ತೀರ್ಪು ಏನು ಎಂಬುದು ಇಂದು ಗೊತ್ತಾಗಲಿದೆ.

ಲೆಕ್ಕಾಚಾರ

‘ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ ಇದೆ. ಮತದಾನದ ಪ್ರಮಾಣ ಗಮನಿಸಿದರೆ, ಕನಿಷ್ಠ 4 ಸಾವಿರ ಹಾಗೂ ಗರಿಷ್ಠ 8 ಸಾವಿರ ಮತಗಳ ಅಂತರದಲ್ಲಿ ಅಭ್ಯರ್ಥಿ ಗೆಲ್ಲಬಹುದು’ ಎಂಬುದು ಮತದಾರರ ಲೆಕ್ಕಾಚಾರ.

‘ಕಮಲ’ದ ಕೋಟೆಯಲ್ಲಿ ಮೇಲಾಗುತ್ತಾ ‘ಕೈ’

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಪರವಾಗಿ ಇಡೀ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ಪ್ರಚಾರ ಮಾಡಿದೆ. ಕಳೆದ ಬಾರಿ ಸೋಲು ಅನುಭವಿಸಿದ್ದ ಪಠಾಣ, ಈ ಬಾರಿ ಗ್ಯಾರಂಟಿ ಯೋಜನೆ ಹಾಗೂ ಅನುಕಂಪದ ಮೇಲೆ ಮತ ಕೇಳಿದ್ದರು. ತಂದೆಯ ಅಭಿವೃದ್ಧಿ ಕೆಲಸಗಳು ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಈ ಬಾರಿ ಭರತ್ ಬೊಮ್ಮಾಯಿ ಅವರಿಗೆ ಗೆಲುವಿನ ಅವಕಾಶಗಳು ಹೆಚ್ಚಿವೆ. ನಾಲ್ಕು ಬಾರಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಕ್ಷೇತ್ರದ ಪ್ರಮುಖ ಮುಖಂಡರ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಬಂಡಾಯದ ನಡುವೆಯೂ ಮುಖಂಡರ ಮನವೊಲಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಬಂಕಾಪುರದಲ್ಲಿ ಮುಸ್ಲಿಂ ಸಮುದಾಯದವರ ಸಭೆ ನಡೆಸಿದ್ದ ಅವರು, ‘ನಿಮ್ಮೊಂದಿಗೆ ನಾನಿದ್ದೇನೆ. ಮಗನನ್ನು ಗೆಲ್ಲಿಸಿ’ ಎಂದು ಕೋರಿದ್ದರು.

ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು–ಶಾಸಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಬೆವರು ಸುರಿಸಿದ್ದಾರೆ.
.Channapatna Election Results Highlights: ನಿಖಿಲ್ ಹಿಂದಿಕ್ಕಿದ ಯೋಗೇಶ್ವರ್.Karnataka Bypoll Results: ಚನ್ನಪಟ್ಟಣದಲ್ಲಿ ನಿಖಿಲ್ಗೆ ಭಾರಿ ಹಿನ್ನಡೆ, ಮೂರೂ ಕಡೆ 'ಕೈ' ಮೇಲುಗೈ.Election Results | ಜಾರ್ಖಂಡ್ನಲ್ಲಿ ಇಂಡಿಯಾ ಬಣ ಮುನ್ನಡೆ; ಮಹಾರಾಷ್ಟ್ರದಲ್ಲಿ ಮಹಾಯುತಿ ದ್ವಿಶತಕ.Maharashtra Election Results Highlights: ಮಹಾಯುತಿ ಕೂಟಕ್ಕೆ ಭಾರಿ ಮುನ್ನಡೆ.Jharkhand Election Results Highlights: NDAಗೆ ಹಿನ್ನಡೆ, ಇಂಡಿಯಾಗೆ ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.