ಕೆಕೆಆರ್‌ಡಿಬಿಯಲ್ಲಿ ನೂರಾರು ಕಾಮಗಾರಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) 2022–23ನೇ ಸಾಲಿನಲ್ಲಿ ₹ 3,000 ಕೋಟಿ ಅನುದಾನ ನೀಡಲಾಗಿದೆ. ಹಿಂದಿನ ವರ್ಷದಲ್ಲಿ ಉಳಿಕೆಯಾದ ಮೊತ್ತ ₹ 785 ಕೋಟಿ ಸೇರಿ, ಒಟ್ಟು ₹ 3,785 ಕೋಟಿ ವೆಚ್ಚಕ್ಕೆ ಲಭ್ಯವಿತ್ತು. ಟೆಂಡರ್ ಪಡೆದವರಿಗೆ, ಒಟ್ಟು ಮೊತ್ತದಲ್ಲಿ ಶೇ 40ರಷ್ಟು ಹಣವನ್ನು ಮುಂಗಡವಾಗಿ ನೀಡಲಾಗಿದ್ದು, ಆ ಮೊತ್ತ ಸುಮಾರು ₹ 600 ಕೋಟಿಯಷ್ಟಿದೆ. ₹ 1 ಕೋಟಿಗೂ ಮೀರಿದ ನೂರಾರು ಕಾಮಗಾರಿಗಳನ್ನು ಮಂಡಳಿಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಎಲ್ಲ ಕಾಮಗಾರಿಗಳಿಗೆ ತಡೆ ನೀಡುವಂತೆ ಹೊಸ ಸರ್ಕಾರ ಸೂಚಿಸುತ್ತಿದ್ದಂತೆ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ನಡೆಯಬೇಕಿದ್ದ ₹ 9 ಕೋಟಿಯ ಕಾಮಗಾರಿಗೆ ತಡೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.