ಬಾಗಲಕೋಟೆ: ’ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್‌ನವರು ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಹಾಗಿದ್ದರೆ ಅವರ ಹೆಸರು ಬಹಿರಂಗಪಡಿಸಿ ಬಂಧಿಸಲಿ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಹಗರಣದಲ್ಲಿ ಬಿಜೆಪಿಯಇಬ್ಬರು ಪ್ರಭಾವಿ ನಾಯಕರು ಇದ್ದಾರೆ ಅನ್ನೋ ಮಾಹಿತಿ ನಮಗೆ ಇದೆ. ಹಗರಣದ ತನಿಖೆ ಮಾಡಿಸುವ ಅಧಿಕಾರ ಇರೋದು ಮುಖ್ಯಮಂತ್ರಿಗೆ. ಹೀಗಾಗಿ ಅವರೇಹೆಸರು ಬಹಿರಂಗಪಡಿಸಲಿ. ಆಗ ಹಗರಣದಲ್ಲಿ ಕಾಂಗ್ರೆಸ್‌ನವರು, ಬಿಜೆಪಿಯವರು ಇಲ್ಲವೇ ಜೆಡಿಎಸ್‌ನವರು ಇದ್ದರೆ ಗೊತ್ತಾಗಲಿದೆ‘ ಎಂದರು.

ಪೊಲೀಸರು ಆರೋಪಿ ಶ್ರೀಕಿಯಿಂದ ಬಿಟ್ ಕಾಯಿನ್ ವಶಪಡಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗೆ ವಶಕ್ಕೆ ಪಡೆದ ಬಿಟ್ ಕಾಯಿನ್ ಯಾರ ಬಳಿ ಹೋಗಿದೆ. ಯಾರ ಖಾತೆಗೆ ವರ್ಗಾವಣೆ ಆಗಿದೆ. ಪೊಲೀಸರಿಗೆ ಹೋಗಿದೆಯಾ? ರಾಜಕಾರಣಿಗಳಿಗೆ ಹೋಗಿದೆಯಾ ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ಹೇಳಬೇಕಲ್ವಾ. ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದರಿಂದ ಈ ವಿಚಾರದಲ್ಲಿ ಸ್ವತಂತ್ರವಾಗಿ ತನಿಖೆ ಮಾಡಲಿದ್ದಾರೆ ಎಂಬುದರ ಬಗ್ಗೆಯೂ ನಮಗೆ ಅನುಮಾನವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.