ಬೆಂಗಳೂರು: ಅರಣ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿಗಳಿಗಿಂತ (ಆರ್ಎಫ್ಒ) ಕೆಳಹಂತದ ಅಧಿಕಾರಿಗಳಿಗೆ ಇದ್ದ ಎಫ್ಐಆರ್ ದಾಖಲಿಸುವ ಅಧಿಕಾರವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.

ಅರಣ್ಯಭೂಮಿ ಒತ್ತುವರಿ, ಮರಗಳ ಕಳ್ಳಸಾಗಣೆ, ವನ್ಯಜೀವಿಗಳ ಬೇಟೆಯಂತಹ ಪ್ರಕರಣಗಳು ನಡೆದಾಗ ಉಪವಲಯ ಅರಣ್ಯಾಧಿಕಾರಿಗಳು, ಬೀಟ್ ಫಾರೆಸ್ಟರ್ಗಳು ಎಫ್ಐಆರ್ ದಾಖಲಿಸುತ್ತಿದ್ದರು. ಇನ್ನು ಮುಂದೆ ಇವರಿಗೆ ಆ ಅಧಿಕಾರ ಇಲ್ಲ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ) ಬ್ರಿಜೇಶ್ ಕುಮಾರ್ ದೀಕ್ಷಿತ್ ಸುತ್ತೋಲೆ ಹೊರಡಿಸಿದ್ದಾರೆ.

ಈ ಸುತ್ತೋಲೆಗೆ ಅವರು ನೀಡಿರುವ ಕಾರಣ ಹೀಗಿದೆ– ‘ಕರ್ನಾಟಕ ಅರಣ್ಯ ಕಾಯ್ದೆ 1963ಕ್ಕೆ 2000ರಲ್ಲಿ ತಿದ್ದುಪಡಿ ಮಾಡಿದ್ದು, ಆ ತಿದ್ದುಪಡಿಯ ಸೆಕ್ಷನ್ 62(ಎ) ಅನ್ವಯ ವಲಯ ಅರಣ್ಯಾಧಿಕಾರಿಗಿಂತ ಕೆಳ ಹಂತದ ಅಧಿಕಾರಿಗಳಿಗೆ ಎಫ್ಐಆರ್ ಅಧಿಕಾರ ಇಲ್ಲ’.

ಅರಣ್ಯ ಇಲಾಖೆ ನ್ಯಾಯಾಲಯಗಳಲ್ಲಿ ಹೂಡಿರುವ ಅಪರಾಧ ಪ್ರಕರಣಗಳು ವಜಾ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ‘ತಾಂತ್ರಿಕ ಕಾರಣಗಳಿಂದ ಪ್ರಕರಣಗಳು ವಜಾಗೊಳ್ಳುತ್ತಿರುವುದು ಗಂಭೀರ ವಿಚಾರ. ಇದನ್ನು ತಪ್ಪಿಸಲು ಸಂಬಂಧಪಟ್ಟ ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿಗಳಿಂದಲೇ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಅಧಿಕಾರ ಹಿಂಪಡೆದದ್ದು ಸರಿಯಲ್ಲ

ಯಾವುದೇ ಅರಣ್ಯದಲ್ಲಿ ಅರಣ್ಯ ಅಪರಾಧಗಳು ನಡೆದಾಗ ತಕ್ಷಣವೇ ಅಲ್ಲಿಗೆ ಧಾವಿಸಿ ಪರಿಶೀಲಿಸಲು ಸಾಧ್ಯವಾಗುವುದು ಆರ್ಎಫ್ಓಗಿಂತ ಕೆಳ ಹಂತದ ಅಧಿಕಾರಿಗಳಿಗೆ ಮಾತ್ರ. ಹೀಗಾಗಿ ಕೆಳಹಂತದ ಅಧಿಕಾರಿಗಳ ಬಗ್ಗೆ ಅರಣ್ಯ ಅಪರಾಧ ಮಾಡುವವರಲ್ಲಿ ಒಂದು ರೀತಿಯ ಭಯ ಇತ್ತು. ಇನ್ನು ಮುಂದೆ ಆ ಭಯ ಇರುವುದಿಲ್ಲ. ಕರ್ನಾಟಕ ಅರಣ್ಯ ಸಂಹಿತೆಯಡಿ ಇವರಿಗೆ ಎಫ್ಐಆರ್ ದಾಖಲಿಸುವ ಅಧಿಕಾರ ನೀಡಲಾಗಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಅರಣ್ಯ ಅಪರಾಧ ನಡೆದಾಗ ಆರ್ಎಫ್ಓ ಸ್ಥಳಕ್ಕೆ ಬರುವವರೆಗೆ ಕಾಯಬೇಕಾಗುತ್ತದೆ. ಒಂದು ವೇಳೆ ವಲಯ ಅರಣ್ಯ ಅಧಿಕಾರಿ ತನ್ನ ವಲಯದಿಂದ ಹೊರಗೆ ಹೋದಾಗ, ರಜೆಯಲ್ಲಿ ಇದ್ದಾಗ ಆ ಕಾರ್ಯವನ್ನು ಯಾರು ನಿರ್ವಹಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಬೇಟೆ, ಅರಣ್ಯ ಒತ್ತುವರಿ ಮತ್ತು ಮರ ಕಳ್ಳತನ ಅರಣ್ಯದ ಯಾವುದೋ ಮೂಲೆಯಲ್ಲಿ ನಡೆಯುತ್ತದೆ. ಆರ್ಎಫ್ಒ ಅಲ್ಲಿಗೆ ತಲುಪಲು ಬಹಳ ಸಮಯ ಹಿಡಿಯುತ್ತದೆ. ಅಷ್ಟರಲ್ಲಿ ಅಪರಾಧಿ ತಪ್ಪಿಸಿಕೊಂಡು ಹೋಗುವ ಸಾಧ್ಯತೆಯೂ ಇರುತ್ತದೆ ಎಂದು ಮೂಲಗಳು ಹೇಳಿವೆ.

ತಮ್ಮ ಅಧಿಕಾರ ಕಸಿದುಕೊಂಡ ವಿಚಾರವಾಗಿ ಒಂದಷ್ಟು ಕೆಳಹಂತದ ಅಧಿಕಾರಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಮೇಲಿರುತ್ತಿದ್ದ ವಿವಿಧ ರೀತಿ ಒತ್ತಡಗಳು ಕಡಿಮೆ ಆಗಲಿದೆ ಎನ್ನುವುದು. ಆದರೆ, ಇವರಿಗೆ ಇನ್ನು ಮುಂದೆ ಬೀಟ್ ಹೋಗುವ ಕೆಲಸ ಬಿಟ್ಟರೆ ಬೇರೇನೂ ಕೆಲಸ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಅರಣ್ಯ ಇಲಾಖೆಯಲ್ಲಿ ಆಡಳಿತದ ಉದ್ದೇಶಕ್ಕಾಗಿ ಕರ್ನಾಟಕ ಅರಣ್ಯ ಸಂಹಿತೆ ಮತ್ತು ಅರಣ್ಯ ಕೈಪಿಡಿಯಲ್ಲಿನ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ. ಕೆಳಹಂತದ ಅಧಿಕಾರಿಗಳ ಜವಾಬ್ದಾರಿಗಳನ್ನು ಇದರಲ್ಲಿ ವಿವರಿಸಲಾಗಿದೆ. ಆದರೆ, ಅಧಿಕಾರದ ವಿಚಾರ ಬಂದಾಗ ಸಂಹಿತೆ ಮತ್ತು ಕೈಪಿಡಿಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂಬ ಸಮಜಾಯಿಷಿ ನೀಡಲಾಗುತ್ತದೆ. ಕಾನೂನಿನಲ್ಲಿ ತಿದ್ದುಪಡಿ ತಂದು ಇವೆರಡಕ್ಕೂ ಕಾನೂನು ಮಾನ್ಯತೆ ನೀಡಬೇಕು ಎಂದು ಹೆಸರು ಹೇಳಲು ಬಯಸದ ಉಪವಲಯ ಅರಣ್ಯಾಧಿಕಾರಿಯೊಬ್ಬರು ಹೇಳಿದರು.

ಕೆಲವು ಪ್ರಕರಣಗಳಲ್ಲಿ ಕೆಳಹಂತದ ಸಿಬ್ಬಂದಿ ದಾಖಲಿಸಿದ ಮೊಕದ್ದಮೆಗಳು ನ್ಯಾಯಾಲಯಗಳಲ್ಲಿ ವಜಾ ಆಗುತ್ತಿವೆ. ಅಧಿಕಾರ ಹಿಂಪಡೆದ ವಿಚಾರದಲ್ಲಿ ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ.
ಬ್ರಿಜೇಶ್ ಕುಮಾರ್ ದೀಕ್ಷಿತ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.