ಬೆಂಗಳೂರು: ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡು ತೊಂದರೆ ಅನುಭವಿಸುತ್ತಿರುವ ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಯಶವಂತಪುರ–ಮೀರಜ್ ನಡುವೆ ನಾಲ್ಕು ದಿನಗಳ ಮಟ್ಟಿಗೆ ‘ಜನಸಾಧಾರಣ ಎಕ್ಸ್ಪ್ರೆಸ್’(ಸಂಖ್ಯೆ 06583/06584) ವಿಶೇಷ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ.

ಆ.8ರಿಂದ 11ರವರೆಗೆ ಯಶವಂತಪುರದಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಸಂಜೆ 6.35ಕ್ಕೆ ತಲುಪಲಿದೆ. ಆ.9ರಿಂದ 12ರವರೆಗೆ ಮೀರಜ್ನಿಂದ ರಾತ್ರಿ 9.20ಕ್ಕೆ ಹೊರಟು ಮರುದಿನ ಬೆಳಿಗ್ಗೆ 11ಕ್ಕೆ ಯಶವಂತಪುರ ತಲುಪಲಿದೆ.

ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಪಾಚ್ಚಾಪುರ, ಗೋಕಾಕ ರಸ್ತೆ, ಘಟಪ್ರಭಾ, ಚಿಕ್ಕೋಡಿ ರಸ್ತೆ, ರಾಯಘಡ, ಚಿಂಚೋಳಿ, ಕುಡಚಿ, ಉಗಾರ ಖುರ್ದ, ವಿಜಯನಗರದಲ್ಲಿ ನಿಲುಗಡೆಗೆ ಅವಕಾಶ ಇದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.