ಮೈಸೂರು: ಇಳಿವಯಸ್ಸಿನಲ್ಲಿ ಸಂಸತ್ತಿಗೆ ಹೋಗುವಾಗ ಅಕ್ಕ ಪಕ್ಕ ನಿಂತು ಆಸರೆಯಾಗಲಿ ಎಂಬ ಉದ್ದೇಶದಿಂದ ಎಚ್.ಡಿ.ದೇವೇಗೌಡ ಅವರು ಮೊಮ್ಮಕ್ಕಳನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಬುಧವಾರ ವ್ಯಂಗ್ಯವಾಡಿದರು.

ನಗರದಲ್ಲಿ ಆಯೋಜಿಸಿದ್ದ ನಾಲ್ಕು ಲೋಕಸಭಾ ಕ್ಷೇತ್ರಗಳ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದರು.

‘ದೇವೇಗೌಡ ಅವರಿಗೆ ಈಗ 86 ವರ್ಷ. ಆದರೂ ಚುನಾವಣೆಗೆ ನಿಲ್ತೀನಿ ಅಂತ ಹೇಳುತ್ತಿದ್ದಾರೆ’ ಎಂದರು.

ಸಂಸತ್ತಿಗೆ ಕೈಹಿಡಿದುಕೊಂಡು ಹೋಗಲು ಪುಟ್ಟರಾಜು, ಚೆಲುವರಾಯಸ್ವಾಮಿ ಇದ್ದರು. ಈ ಬಾರಿ ಆ ಕೆಲಸಕ್ಕೆ ಪ್ರಜ್ವಲ್, ನಿಖಿಲ್ ಅವರನ್ನು ಆಯ್ಕೆಮಾಡಿಕೊಂಡಿದ್ದಾರೆ ಎಂದರು.

ದೇವೇಗೌಡರ ಅಪ್ಪನ ಮನೆ ಆಸ್ತಿನಾ: ‘ರಾಮನಗರ ಕ್ಷೇತ್ರ ಕುಮಾರಣ್ಣನಿಗೆ, ಚನ್ನಪಟ್ಟಣ ಅವರ ಹೆಂಡತಿಗೆ, ಮಂಡ್ಯ ಲೋಕಸಭಾ ಕ್ಷೇತ್ರ ಅವರ ಮಗನಿಗಂತೆ. ಈ ರಾಜ್ಯ ದೇವೇಗೌಡ ಅವರ ಅಪ್ಪನ ಮನೆ ಆಸ್ತಿನಾ’ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದರು.

‘ಬೇಳೂರ್‌ಗೆ ನಾಲಗೆ ಇರುತ್ತಿರಲಿಲ್ಲ’

‘ಪ್ರಧಾನಿ ಮೋದಿ ಅವರಿಗೆ ಗುಂಡು ಹಾಕಿ ಎಂದಿರುವ ಬೇಳೂರು ಗೋಪಾಲಕೃಷ್ಣ ಅವರಂತಹ ಪುಢಾರಿಗಳ ನಾಲಗೆ ಇಲ್ಲದಂತೆ ಮಾಡಬೇಕು. ನಮ್ಮ ಕೊಡಗಿನಲ್ಲೇನಾದರೂ ಇರುತ್ತಿದ್ದರೆ ಇಷ್ಟೊತ್ತಿಗೆ ಅವರ ನಾಲಗೆ ಇರುತ್ತಿರಲಿಲ್ಲ’ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.