ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲೂ ಮಕ್ಕಳು ಶುದ್ಧ ನೀರು ಕುಡಿಯುವುದಕ್ಕಾಗಿ ‘ಕುಡಿಯುವ ನೀರಿನ ಬೆಲ್’ ಎಂಬ ವಿಶೇಷ ಸಮಯವನ್ನು ನಿಗದಿಪಡಿಸಲಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣ
ದಲ್ಲಿ ಮಕ್ಕಳು ನೀರು ಕುಡಿಯುವುದು ಅವರ ಆರೋಗ್ಯ ಮತ್ತು ಬೆಳವಣಿಗೆ ದೃಷ್ಟಿಯಿಂದ ಅವಶ್ಯಕ. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರತಿ ದಿನ ಶಾಲಾ ಅವಧಿಯಲ್ಲಿ ಬೆಳಗ್ಗೆ ಎರಡನೇ ಮತ್ತು ಮೂರನೇ ಅವಧಿ ನಡುವೆ 10 ನಿಮಿಷಗಳು, ಮಧ್ಯಾಹ್ನ ಮೂರು ಮತ್ತು ನಾಲ್ಕನೇ ಅವಧಿ ಮಧ್ಯೆ 10 ನಿಮಿಷಗಳ ಸಮಯ ನಿಗದಿ ಮಾಡಲಾಗಿದೆ. ಇದನ್ನು ಸೂಚಿಸಲು ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಶಾಲಾ ಬೆಲ್ ಬಾರಿಸಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.