ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಾದವಿದ್ಯಾರ್ಥಿಗಳು ಮರಳಿ ಎಂಜಿನಿಯರಿಂಗ್ ಸೇರಲು ಇಚ್ಛಿಸಿದರೆ ಮುಂದುವರಿದ ಸೀಟು ಹಂಚಿಕೆಯಲ್ಲಿ ಪರಿಗಣಿಸಬೇಕು ಎಂದು ಹಲವು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.

‘ನೀಟ್‌ನಲ್ಲೂ ರ್‍ಯಾಂಕಿಂಗ್ ಇದ್ದ ಕಾರಣ ವೈದ್ಯಕೀಯ ಸೀಟು ದೊರೆತಿದೆ. ಕೌನ್ಸಿಲಿಂಗ್ ಮೂಲಕ ಸೀಟು ಆಯ್ಕೆ ಮಾಡಿಕೊಂಡಿದ್ದೆವು. ದುಬಾರಿ ಶುಲ್ಕದ ಕಾರಣ ಹಲವು ವಿದ್ಯಾರ್ಥಿಗಳು ವಾಪಸ್ ಎಂಜಿನಿಯರ್ ಕಾಲೇಜಿಗೆ ಪ್ರವೇಶ ಪಡೆಯಲು ನಿರ್ಧರಿಸಿದ್ದೇವೆ. ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಳ್ಳುವ ಮೊದಲು ಎಂಜಿನಿಯರಿಂಗ್ ಶುಲ್ಕ ಪಾವತಿಸಿದ್ದೆವು. ಆದರೆ, ಕೆಇಎ ಎಂಜಿನಿಯರಿಂಗ್ ಸೀಟು ಹಂಚಿಕೆ ರದ್ದುಪಡಿಸಿದೆ. ಇದರಿಂದ ಅತಂತ್ರರಾಗಿದ್ದೇವೆ’ ಎಂದು ದೂರಿದ್ದಾರೆ.

‘ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಳ್ಳುವಾಗ ಶುಲ್ಕದ ಅರಿವು ಇರಲಿಲ್ಲ. ದುಬಾರಿ ಶುಲ್ಕ ಪಾವತಿಸುವ ಶಕ್ತಿ ಇಲ್ಲದೇ ವಾಪಸ್ ಎಂಜಿನಿಯರಿಂಗ್ ಸೇರಲು ನಿರ್ಧರಿಸಿದ್ದೇವೆ’ ಎನ್ನುವುದು ವಿದ್ಯಾರ್ಥಿಗಳ ಸಮಜಾಯಿಷಿ.

‘ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಒಟ್ಟಿಗೆ ಪಡೆಯಲು ಅವಕಾಶ ಇಲ್ಲ. ಮೊದಲ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು ಪಡೆದು, ಶುಲ್ಕ ಪಾವತಿಸಿದ ನಂತರ ವೈದ್ಯಕೀಯ ಸೀಟು ಪಡೆಯುವ ಅಭ್ಯರ್ಥಿಗಳು ಮತ್ತೆ ಎಂಜಿನಿಯರಿಂಗ್ ಪ್ರವೇಶಕ್ಕೆ ಮರಳಲು ನಿಯಮದಲ್ಲಿ ಅವಕಾಶವಿಲ್ಲ. ಶುಲ್ಕ ಪಾವತಿಸಲು ಶಕ್ತಿ ಇಲ್ಲದೇ ವಾಪಸ್ ಬಂದಿದ್ದೇವೆ ಎನ್ನುವ ಕಾರಣ ಒಪ್ಪಲು ಸಾಧ್ಯವಿಲ್ಲ. ವೈದ್ಯಕೀಯ ಸೀಟು ಪಡೆದಿರುವ ಎಲ್ಲ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಶುಲ್ಕವನ್ನು ಪೂರ್ಣ ಹಿಂದಿರುಗಿಸಲಾ ಗಿದೆ’ ಎನ್ನುತ್ತಾರೆ ಕೆಇಎ ಕಾರ್ಯನಿರ್ವಾ ಹಕ ನಿರ್ದೇಶಕಿಎಸ್. ರಮ್ಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.