ಬೆಂಗಳೂರು: ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ನವದೆಹಲಿಯಲ್ಲಿನ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಲಾಗಿದೆ.

ಇವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಮತ್ತು ಎಲ್ಲ ಸೌಲಭ್ಯಗಳನ್ನು ನೀಡಿ ಆದೇಶ ಹೊರಡಿಸಲಾಗಿದೆ.

ಎನ್.ಭೋಸರಾಜು ಸಭಾನಾಯಕ: ವಿಧಾನ ಪರಿಷತ್ನ ಸಭಾನಾಯಕರನ್ನಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಸಚಿವ ಎನ್.ಭೋಸರಾಜು ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿದ ಭೋಸರಾಜು ಅವರನ್ನು ಆ ಬಳಿಕ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. ವಿಧಾನಪರಿಷತ್ ಸಭಾನಾಯಕರನ್ನಾಗಿ ಬೇರೆ ಹಿರಿಯ ಸಚಿವರನ್ನು ಆಯ್ಕೆ ಮಾಡಬಹುದು ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ನಡೆದಿತ್ತು. ಇದೀಗ ಆ ಜವಾಬ್ದಾರಿಯೂ ಬೋಸರಾಜ ಅವರ ಹೆಗಲೇರಿದೆ.

ವಿಧಾನಪರಿಷತ್ತಿನ ಮುಖ್ಯ ಸಚೇತಕರನ್ನಾಗಿ ಸಲೀಂ ಅಹಮದ್ ಮತ್ತು ವಿಧಾನಸಭೆ ಮುಖ್ಯ ಸಚೇತಕರನ್ನಾಗಿ ರಾಮದುರ್ಗ ಶಾಸಕ ಅಶೋಕ ಎಂ.ಪಟ್ಟಣ ಅವರನ್ನು ನೇಮಕ ಮಾಡ
ಲಾಗಿದೆ. ಸಲೀಂ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.