ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು 6 ನೇ ತರಗತಿಯ ಸಮಾಜವಿಜ್ಞಾನ ಭಾಗ 1ರಲ್ಲಿದ್ದ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ ಕುರಿತ ವಿವರಗಳನ್ನು ಮರು ಪರಿಷ್ಕರಣೆ ಮಾಡುವಾಗ ಒಂದೇ ವಾಕ್ಯಕ್ಕೆ ಸೀಮಿತಗೊಳಿಸಿದೆ!

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದಾಗ, ‘ಸಿದ್ಧಗಂಗಾ ಮಠವು ಶ್ರೀ ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನ ದಾಸೋಹದ ಕಾರ್ಯ ನಡೆಸುತ್ತಿದೆ. ರಾಮನಗರ ಜಿಲ್ಲೆಯಲ್ಲಿ ನೆಲೆಸಿದ್ದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳೆದ ಆದಿ ಚುಂಚನಗಿರಿ ಮಠದ ಶೈಕ್ಷಣಿಕ ಸೇವೆಯು ಅಪೂರ್ವವಾಗಿದ್ದು, ಮೂಲ ಶಿಕ್ಷಣ, ವೃತ್ತಿ ಶಿಕ್ಷಣ ಕಾಲೇಜುಗಳನ್ನು ನಡೆಸುತ್ತಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ’ ಎಂಬ ಭಾಗವನ್ನು ಅಳವಡಿಸಿತ್ತು.

ಆದರೆ, ಚಕ್ರತೀರ್ಥ ಸಮಿತಿಯು ಈ ಭಾಗಕ್ಕೆ ಕತ್ತರಿ ಪ್ರಯೋಗಿಸಿ, ‘ಸಿದ್ಧಗಂಗಾ ಮಠ ಹಾಗೂ ಆದಿ ಚುಂಚನಗಿರಿ ಮಠ, ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ’ ಎಂಬ ಒಂದು ವಾಕ್ಯವನ್ನು ಮಾತ್ರ ಉಳಿಸಿಕೊಂಡಿದೆ. ಸಿದ್ಧಗಂಗಾ ಮಠ ಹಾಗೂ ಆದಿ ಚುಂಚನಗಿರಿ ಮಠಗಳ ಕುರಿತು ವಿವರಗಳನ್ನು ಪಾಠದಿಂದ ಕೈ ಬಿಡುವ ಮೂಲಕಚಕ್ರತೀರ್ಥ ಸಮಿತಿಯು ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.