ಮೈಸೂರು/ಚಾಮರಾಜನಗರ/ಗುಂಡ್ಲುಪೇಟೆ: ದೇಶದಲ್ಲಿ 2006ರಿಂದ 2022ರ ಅವಧಿಯಲ್ಲಿ ಹುಲಿಗಳ ಸಂತತಿ ದ್ವಿಗುಣಗೊಂಡಿದೆ. 2006ರಲ್ಲಿ 1,411 ಇದ್ದ ಹುಲಿಗಳು, 2022ಕ್ಕೆ 3,167ಕ್ಕೇರಿದೆ.

ಹುಲಿ ಯೋಜನೆ ಕುರಿತ 2022ರ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದ್ದು, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಲ ನಕ್ಷೆಗಳನ್ನು ಸೇರಿಸಿರುವುದು ಈ ವರದಿಯ ವಿಶೇಷ! ಆದರೆ, ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ ಎಂಬ ಮಾಹಿತಿ ಈ ವರದಿಯಲ್ಲಿ ಇಲ್ಲ.

ಜಗತ್ತಿನ ದೊಡ್ಡ ಜೀವವೈವಿಧ್ಯದ ಸಮೀಕ್ಷೆಗಳಲ್ಲಿ ಒಂದಾದ ರಾಷ್ಟ್ರೀಯ ಹುಲಿಗಣತಿ ವರದಿ–2022 ಪ್ರಕಾರ ಗಣತಿಯಲ್ಲಿ ಫೋಟೊಗಳನ್ನು ಗುರು ತಿಸಲು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಲಾಗಿದೆ. ಡ್ರೋನ್, ಇ–ಐ ಸಮೀಕ್ಷೆ, ಎಂ–ಸ್ಟ್ರೈಪ್ಸ್, ಕ್ಯಾಮೆರಾ ಟ್ರ್ಯಾಪ್ ಮೂಲಕ ಸಮೀಕ್ಷೆ ನಡೆದಿದೆ.

5 ವಲಯ: ಜೀವ ಭೂಗೋಳ, ಆವಾಸಸ್ಥಾನಗಳ ಸಂಪರ್ಕ ಹಾಗೂ ದೇಶದ ಭೂ ಸ್ವರೂಪವನ್ನು ಆಧರಿಸಿ 5 ಹುಲಿ ವಲಯ ವಿಂಗಡಿಸಲಾಗಿದೆ. 1. ಶಿವಾಲಿಕ್– ಗಂಗಾ ಮೈದಾನ ಪ್ರದೇಶ, 2.ಮಧ್ಯಭಾರತ ಮತ್ತು ಪೂರ್ವಘಟ್ಟಗಳು, 3. ಪಶ್ಚಿಮ ಘಟ್ಟಗಳು, 4. ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಮೈದಾನ, 5. ಸುಂದರ್ ಬನ್ಸ್.

ಪಶ್ಚಿಮ ಘಟ್ಟದಲ್ಲಿ ಕುಸಿತ: ಶಿವಾಲಿಕ್– ಗಂಗಾ ಮೈದಾನ, ಈಶಾನ್ಯ ಬೆಟ್ಟಗಳು, ಸುಂದರ್ ಬನ್ಸ್, ಮಧ್ಯಭಾರತ– ಪೂರ್ವಘಟ್ಟ ವಲಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ. ಪಶ್ಚಿಮ ಘಟ್ಟದ ನೀಲಗಿರಿ ಜೀವವೈವಿಧ್ಯ ವಲಯವು ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳಿರುವ ಪ್ರದೇಶವೆಂಬ ಹೆಗ್ಗಳಿಕೆ ಪಡೆದಿದೆ.

ಪಶ್ಚಿಮಘಟ್ಟದಲ್ಲಿ 981ರಿಂದ 824ಕ್ಕೆ ಇಳಿದಿದೆ. ವಯನಾಡ್, ಬಿಳಿಗಿರಿರಂಗನಬೆಟ್ಟ, ಗೋವಾ– ಕರ್ನಾಟಕ ಗಡಿ ಅರಣ್ಯ, ಮೂಕಾಂಬಿಕಾ– ಶರಾವತಿ– ಶಿರಸಿ ಪ್ರದೇಶದಲ್ಲಿ ಕಡಿಮೆಯಾಗಿವೆ. ಪಶ್ಚಿಮಘಟ್ಟ ವಲಯದಲ್ಲಿ 12 ಹುಲಿ ಸಂರಕ್ಷಿತ ಪ್ರದೇಶಗಳು, 20 ರಾಷ್ಟ್ರೀಯ ಉದ್ಯಾನಗಳು, 68 ವನ್ಯಜೀವಿ ಸಂರಕ್ಷಿತ ಪ್ರದೇಶಗಳಿವೆ.

ಅಣಶಿ– ದಾಂಡೇಲಿ ಪ್ರದೇಶ ಹೊರತು ಪಡಿಸಿ ಪಶ್ಚಿಮ ಘಟ್ಟಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮುದುಮಲೈ, ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳು ಸಂಖ್ಯೆಯಲ್ಲಿ ವ್ಯತ್ಯಾಸವಾಗಿಲ್ಲ. ಬಂಡೀಪುರ, ನಾಗರಹೊಳೆಯಲ್ಲಿ ವ್ಯಾಘ್ರಗಳು ಹೆಚ್ಚಾಗಿದ್ದರೂ ಅದಕ್ಕೆ ಹೊಂದಿಕೊಂಡಿರುವ ವೈನಾಡ್ ಹಾಗೂ ಬಿಳಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಹುಲಿ ಸಂಖ್ಯೆಯು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ವನ್ಯಜೀವಿ ಕಳ್ಳಸಾಗಣೆ, ಬೇಟೆ ಜೊತೆ ಮಾನವ ಹಸ್ತಕ್ಷೇಪ ಮುಂದುವರಿದಿದೆ. ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದೆ. ಸ್ಥಳೀಯರ ಸಹಕಾರ ದಿಂದ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಪ್ರಯತ್ನಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮೂಕಾಂಬಿಕಾ–ಶರಾವತಿ– ಶಿರಸಿ ವಲಯದಲ್ಲಿ ಹುಲಿ ಸಂಖ್ಯೆ ಇಳಿಕೆಯಾಗಿದ್ದರೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಖ್ಯೆಯು ಸ್ಥಿರವಾಗಿದೆ. ವಿಶ್ವದ ಜೀವವೈವಿಧ್ಯದ ಪ್ರಮುಖ ತಾಣ ಉಳಿಸಲು ಮಾನವ– ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವುದು ತುರ್ತು ಎಂದೂ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.