ಹುಬ್ಬಳ್ಳಿ: 'ಡಾ. ಬಿ.ಆರ್ ಅಂಬೇಡ್ಕರ್ ಅವರು ದೂರದೃಷ್ಟಿಯಿಂದ ಸಂವಿಧಾನ ರಚಿಸಿದ್ದು, ಅದಕ್ಕೆ ಜೀವಂತಿಕೆಯಿಟ್ಟು ತಿದ್ದುಪಡಿಗೂ ಅವಕಾಶ ಇಟ್ಟಿದ್ದಾರೆ' ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇರುವ ಅಂಬೇಡ್ಕರ್ ಮೂರ್ತಿಗೆ ಭಾನುವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

'ನಾವು ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ಹೇಗೆ ನಿಭಾಯಿಸಬೇಕು ಎನ್ನುವ ಚಿಂತನೆ ನಮಗೆ ಇರಲಿಲ್ಲ. ಅದಕ್ಕೊಂದು ಚೌಕಟ್ಟು, ನೀತಿ, ರೀತಿಯನ್ನು ಸಂವಿಧಾನದ ಮೂಲಕ ಅಳವಡಿಸಿ ಕೊಟ್ಟವರು ಡಾ. ಬಿ.ಆರ್. ಅಂಬೇಡ್ಕರ್. ಅವರ ಚಿಂತನೆ, ತತ್ವ-ಸಿದ್ಧಾಂತ ಇಂದಿಗೂ ಪ್ರಸ್ತುತ. ಅವರು ದೇಶಕ್ಕೆ ದೊಡ್ಡ ಶಕ್ತಿ' ಎಂದರು.

'ಪಾಶ್ಚಿಮಾತ್ಯ ದೇಶಗಳ ಸಂವಿಧಾನ ಹಲವಾರು ಸಂದರ್ಭಗಳಲ್ಲಿ ವಿಫಲವಾಗಿದೆ. ಆದರೆ, ಭಾರತದ ಸಂವಿಧಾನ ಎಂದಿಗೂ ವಿಫಲವಾಗಿಲ್ಲ. ಸರ್ಕಾರ ಬದಲಾದರೂ ಸಂವಿಧಾನ ಹಾಗೆಯೇ ಇರುತ್ತದೆ. ಉತ್ತಮ ಆಡಳಿತಕ್ಕೆ ನಮ್ಮ ಸಂವಿಧಾನವೇ ಮೂಲ ಕಾರಣ. ಅದರಲ್ಲಿ ಸಾಮಾಜಿಕ ನ್ಯಾಯ, ಸಂಘಟನೆ ಮತ್ತು ಹೋರಾಟದ ಮಹತ್ವ ತಿಳಿಸಲಾಗಿದೆ' ಎಂದು ಹೇಳಿದರು.

'ಗಾಂಧೀಜಿಗೆ ಮಹಾತ್ಮ ಎಂದು ಕರೆದಂತೆ, ಅಂಬೇಡ್ಕರ್ ಅವರಿಗೂ ಮಹಾತ್ಮ ಅಂಬೇಡ್ಕರ್ ಎಂದು ಕರೆಯಬೇಕು. ದೇಶ ಮತ್ತು ಅಂಬೇಡ್ಕರ್ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.