ಬೆಂಗಳೂರು: ದೇಶವ್ಯಾಪಿ ಲಾಕ್‍ಡೌನ್‌ನಿಂದಾಗಿ ಬೆಂಗಳೂರಿನಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರು ಒಂದು ಹೊತ್ತಿನ ಊಟವೂ ಸಿಗದೆ ಕಷ್ಟ ಅನುಭವಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿವರು ಹೊಟ್ಟೆಪಾಡಿಗಾಗಿ ಭಿಕ್ಷಾಟಣೆಯನ್ನೇ ಅವಲಂಬಿಸಿದ್ದಾರೆ.ರಸ್ತೆಯಲ್ಲಿ ಜನರಿಲ್ಲ, ಅಂಗಡಿಗಳೂಮುಚ್ಚಿವೆ ಹಾಗಾಗಿ ದಿನದ ದುಡಿಮೆಗೆ ಕುತ್ತು ತಂದಿದೆ ಅಂತಾರೆ ಇವರು.

ದಿನದ ಒಂದು ಹೊತ್ತು ಊಟಕ್ಕೆ ನಾವು ಕಷ್ಟಪಡುತ್ತಿದ್ದೇವೆ. ನಮಗೆ ಸಹಾಯ ಮಾಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಹೇಳಿದ್ದಾರೆ.

ಕಾರ್ಮಿಕರಿಗೆ ಮತ್ತು ಸಂಕಷ್ಟದಲ್ಲಿರುವಜನರಿಗೆಸರ್ಕಾರಸಹಾಯ ಮಾಡುತ್ತಿದೆ. ಆದರೆ ನಾವೇನು ತಪ್ಪು ಮಾಡಿದ್ದೇವೆ? ನಾವು ಹೊರಗೆ ಹೋಗಿ ಹಣ ಅಥವಾ ಆಹಾರ ಕೇಳುವಂತಿಲ್ಲ. ಕನಿಷ್ಠ ಪಕ್ಷ ನಮಗೆ ಆಹಾರವನ್ನಾದರೂ ನೀಡಿ. ನಮ್ಮ ಜತೆ ಇರುವ ಕೆಲವರ ಕೈಯಲ್ಲಿ ಔಷಧಿಗಾಗಿ ಹಣವಿಲ್ಲ. ಹಲವಾರು ಹಿರಿಯರು, ಎಚ್‌ಐವಿ ಬಾಧಿತರೂ ನಮ್ಮೊಂದಿಗೆ ಇದ್ದಾರೆ ಅಂತಾರೆ ಎಂದು ಮತ್ತೊಬ್ಬ ಲೈಂಗಿಕ ಅಲ್ಪಸಂಖ್ಯಾತರು ಹೇಳಿದ್ದಾರೆ.

ಆದಾಗ್ಯೂ, ಅಕ್ಕೈ ಪದ್ಮಶಾಲಿ ಅವರ ನೇತೃತ್ವದಲ್ಲಿ 'ಒಂದೆಡೆ' ಎಂಬ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಈ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತರ ಮನೆಗೆ ದಿನಸಿ ಸಾಮಾಗ್ರಿಗಳನ್ನು ತಲುಪಿಸುತ್ತದೆ.

ಈ ಬಗ್ಗೆ ಪಿಟಿಐ ಜತೆ ಮಾತನಾಡಿದ ಅಕ್ಕೈ ಪದ್ಮಶಾಲಿ, ಇತರ ಸಮುದಾಯಗಳಿಗೆ ಸಹಾಯ ಮಾಡುವಂತೆ ಪರಿಸ್ಥಿತಿ ಸುಧಾರಿಸಿಕೊಳ್ಳುವ ತನಕ ನಮಗೆ ಸರ್ಕಾರ ಪ್ಯಾಕೇಜ್‌ಗಳನ್ನು ಘೋಷಿಸಬೇಕು.ನಮ್ಮ ಸಮುದಾಯದತ್ತ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ನಿರಾಸೆ ತಂದಿದೆ. ಲಾಕ್‍ಡೌನ್ ನಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೈನಂದಿನ ಜೀವನ ಸಾಗುವುದೇ ರಸ್ತೆಯಲ್ಲಿ ಭಿಕ್ಷೆ ಬೇಡುವುದರಿಂದ ಮತ್ತು ಲೈಂಗಿಕ ಕಾರ್ಯಕರ್ತರಾಗಿ ದುಡಿಯುವುದಿಂದ. ದಿನಗೂಲಿ ಕಾರ್ಮಿಕರಂತೆ ನಮ್ಮ ದೈನಂದಿನ ಬದುಕು ದುಸ್ತರವಾಗಿದೆ. ಆಹಾರವಿಲ್ಲ, ಬಾಡಿಗೆ ಕೊಡಲು ಹಣವಿಲ್ಲ. ಎಚ್‍ಐವಿ ಬಾಧಿತರಿಗೆ ಔಷಧಿ ಖರೀದಿಸಲು ಹಣವಿಲ್ಲ.

ನಮ್ಮ ಸಮುದಾಯದ ಜನರಿಗೆ ಸರಿಯಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಯಾರೂ ಹೇಳಿಕೊಡಲಿಲ್ಲ. ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ನಮ್ಮಲ್ಲಿ ಯಾರ ಬಳಿಯೂ ಟಿವಿ ಇಲ್ಲ ಎಂದಿದ್ದಾರೆ ಅಕ್ಕೈ ಪದ್ಮಶಾಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.