ಬೆಂಗಳೂರು: ‘ಒಂದೇ ವಿಭಾಗ, ಒಂದೇ ಕಚೇರಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ಇಲಾಖೆ ನೌಕರರು ಶೀಘ್ರವೇ ವರ್ಗಾವಣೆಗೊಳ್ಳಲಿದ್ದಾರೆ’ ಎಂದು ಸಾರಿಗೆ ಆಯುಕ್ತ ಎನ್. ಶಿವಕುಮಾರ್ ತಿಳಿಸಿದರು.

‘ಆರ್‌ಟಿಒ ಕಚೇರಿಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಲ ಬದಲಾವಣೆಗಳು ಅನಿವಾರ್ಯ. ಹೀಗಾಗಿ, ಒಂದೇ ಕಡೆ ಹಲವು ವರ್ಷ ಇರುವವರ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಶೇ 50ರಷ್ಟು ಸಿಬ್ಬಂದಿ ಕೊರತೆ: ‘ಇಲಾಖೆಯಲ್ಲಿರುವ 3 ಸಾವಿರ ಮಂಜೂರಾದ ಹುದ್ದೆಗಳ ಪೈಕಿ 1,470 ಸಿಬ್ಬಂದಿ ಇದ್ದಾರೆ. ಮೋಟಾರು ವಾಹನ ನಿರೀಕ್ಷಕರು 430 ಮಂದಿ ಇರಬೇಕಿದ್ದು, 130 ಮಂದಿ ಮಾತ್ರ ಇದ್ದಾರೆ. 30 ಹಿರಿಯ ಮೋಟಾರು ವಾಹನ ನಿರೀಕ್ಷಕ ಹುದ್ದೆಗಳಲ್ಲಿ 59 ಹುದ್ದೆ ಖಾಲಿ ಇವೆ’ ಎಂದು ವಿವರಿಸಿದರು.

ಎಂ-ಪರಿವಾಹನ್ ಆ್ಯಪ್: ಪೊಲೀಸ್ ತಪಾಸಣೆ ವೇಳೆ ಡಿಜಿಟಲ್ ದಾಖಲೆಗಳನ್ನು ತೋರಿಸಲು ಅವಕಾಶ ಇದೆ. ಕೇಂದ್ರ ಸರ್ಕಾರದ ಎಂ–ಪರಿವಾಹನ್ ಆ್ಯಪ್‌ನಲ್ಲೂ ವಾಹನಗಳ ಮಾಹಿತಿ ಲಭ್ಯವಿದೆ ಎಂದು ಹೇಳಿದರು.

‘ಈ ಆ್ಯಪ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿದರೆ ವಾಹದ ವಿಮೆ ಸೇರಿ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಈ ಆ್ಯಪ್ ಮೂಲಕವೂ ಪೊಲೀಸರಿಗೆ ದಾಖಲೆ ತೋರಿಸಬಹುದು. ಡಿಜಿ ಲಾಕರ್‌ನಲ್ಲೂ ವಾಹನ ಚಾಲನಾ ಪರವಾನಗಿ, ವಾಹನ ನೋಂದಣಿ ಪ್ರಮಾಣ ಪತ್ರ ಲಭ್ಯವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.