ಬೆಂಗಳೂರು: ‘ಚೆನ್ನವೀರ ಕಣವಿಯವರು ಸೌಮ್ಯ ಸ್ವಭಾವದ ಹಾಗೂ ಮೃದು ಮಾತಿನ ಕವಿಯಾಗಿದ್ದರು. ಅವರು ನವ್ಯ ಮತ್ತು ನವೋದಯದ ಯಾವುದೇ ಗುಂಪಿನ ಕವಿಯಾಗದೆ, ಹಿರಿ-ಕಿರಿಯರ ಜೊತೆ ಆತ್ಮೀಯವಾಗಿ ಬೆರೆತು ಪ್ರೋತ್ಸಾಹಿಸುತ್ತಿದ್ದರು’ ಎಂದುಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷಚಂದ್ರಶೇಖರ ಕಂಬಾರ ಹೇಳಿದರು.

ಸೆಂಟ್ರಲ್ ಕಾಲೇಜು ಆವರಣದ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆದಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಣವಿ ಅವರ ವಿಚಾರಗಳು ಕನ್ನಡದ ಮಾರ್ಗದರ್ಶಿ ಸೂತ್ರಗಳಾಗಿರುತ್ತವೆ.ನಾನು ಧಾರವಾಡದಲ್ಲಿ ಶಿಕ್ಷಣ ಪಡೆದ ಸಂದರ್ಭದಲ್ಲಿ ಅವರ ಪ್ರೀತಿ ಹಾಗೂ ಪ್ರೋತ್ಸಾಹ ಪಡೆದಿದ್ದೇನೆ. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ಬೇಸರ ತಂದಿದೆ’ ಎಂದರು.

ಬೆಳಗಾವಿಯಲ್ಲೂ ‘ಚೆಂಬೆಳಕು’ ಬೀರಿದ್ದ ಚೆನ್ನವೀರ ಕಣವಿ

ವಿಮರ್ಶಕ ಎಸ್.ಆರ್.ವಿಜಯಶಂಕರ್, ‘ಕಣವಿಯವರ ಸಾಹಿತ್ಯ ಹಾಗೂ ವ್ಯಕ್ತಿತ್ವ ಮೃದುವಚನ ಹಾಗೂ ಹಿತವಚನದಂತೆ ಎಲ್ಲರನ್ನೂ ಒಳಗೊಳ್ಳುತ್ತಿತ್ತು. ಅವರ ಜೊತೆಗಿನ ಬಾಂಧವ್ಯ ಮೂರು ದಶಕಗಳಿಗೂ ಮೀರಿದ್ದು’ ಎಂದರು.

ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.