ಮಂಡ್ಯ: ಕೇಂದ್ರ ಸಚಿವರಾದ ನಂತರ ಮಂಡ್ಯ ಜಿಲ್ಲೆಗೆ ಮೊದಲ ಬಾರಿಗೆ ಬಂದ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನೂತನ ಸಂಸದರ ಕಚೇರಿಯನ್ನು ಶನಿವಾರ ಉದ್ಘಾಟಿಸಿದರು.

ಮನೆ ದೇವರಾದ ರಂಗನಾಥಸ್ವಾಮಿ, ಶ್ರೀದೇವಿ, ಭೂದೇವಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ಸಂಸದರ ಕಚೇರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಸರ್ ಎಂ.ವಿಶ್ವೇಶ್ವರಯ್ಯ, ಬಸವೇಶ್ವರ, ನಾಲ್ವಡಿ ಕೃಷ್ಣರಾಜ ಒಡೆಯರ್, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ವಿಶೇಷವಾಗಿ ಪ್ರಧಾನಿ ಅವರೊಂದಿಗೆ ದೇವೇಗೌಡರು ಮತ್ತು ಎಚ್.ಡಿ.ಕೆ ಇರುವ ಭಾವಚಿತ್ರ ಮತ್ತು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಭಾವಚಿತ್ರವನ್ನು ದೊಡ್ಡ ಫ್ರೇಮ್ ಮಾಡಿ ಹಾಕಿಸಲಾಗಿದೆ.

ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರದ ವಿಹಂಗಮ ನೋಟದ ಫೋಟೊ ಕಚೇರಿಯಲ್ಲಿ ಗಮನಸೆಳೆಯುವಂತೆ ಅಳವಡಿಸಲಾಗಿದೆ.

4 ಗಂಟೆ ತಡ:

ಶನಿವಾರ ಸಂಜೆ 4.30ಕ್ಕೆ ಡಿ.ಸಿ ಕಚೇರಿಗೆ ಆಗಮಿಸಿ, ಸಂಸದರ ಕಚೇರಿ ಉದ್ಘಾಟಿಸಬೇಕಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಬರೋಬ್ಬರಿ ನಾಲ್ಕೂವರೆ ಗಂಟೆ ತಡವಾಗಿ ಬಂದು ರಾತ್ರಿ 9 ಗಂಟೆಗೆ ಕಚೇರಿ ಉದ್ಘಾಟಿಸಿದರು.

ಸಂಜೆ 4ರಿಂದಲೇ ಡಿ.ಸಿ ಕಚೇರಿ ಬಳಿ ನಿಂತಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸಚಿವರ ಆಗಮನಕ್ಕೆ ಕಾದು ಕಾದು ಸುಸ್ತಾದರು.

ರಸ್ತೆಯುದ್ದಕ್ಕೂ ಕಿಕ್ಕಿರಿದು ನಿಂತಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಸ್ವಾಗತ ಸ್ವೀಕರಿಸಿ ಬರುವುದು ತಡವಾಯಿತು ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.