ಹುಬ್ಬಳ್ಳಿ: ‘ವಕ್ಫ್ ಮಂಡಳಿಯ ಆಟಾಟೋಪ ತಡೆಗಟ್ಟುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವ ರೀತಿ ತಿದ್ದುಪಡಿ ಮಾಡಬೇಕೆಂದು ವರದಿ ನೀಡುವಂತೆ ಜಂಟಿ ಸಂಸದೀಯ ಸಮಿತಿಯನ್ನು 3 ತಿಂಗಳ ಹಿಂದೆ ರಚಿಸಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಅಹವಾಲುಗಳನ್ನು ಆಲಿಸಲಾಗುತ್ತಿದೆ’ ಎಂದು ಸಂಸದ, ಜಂಟಿ ಸಂಸದೀಯ ಸಮಿತಿಯ ಸದಸ್ಯ ತೇಜಸ್ವಿ ಸೂರ್ಯ ಹೇಳಿದರು.

ವಕ್ಫ್ ಸಂತ್ರಸ್ತರ ಅಹವಾಲು ಆಲಿಸುವ ಮುನ್ನ ಮಾತನಾಡಿದ ಅವರು, ‘ನನ್ನನ್ನೂ ಒಳಗೊಂಡಂತೆ 20 ಜನ ಸದಸ್ಯರ ಸಮಿತಿಯನ್ನು ಪ್ರಧಾನಿ ರಚಿಸಿದ್ದಾರೆ. ವಕ್ಫ್ ಮಂಡಳಿಯಿಂದ ಆಗಿರುವ ಸಮಸ್ಯೆಯನ್ನು ಅರಿಯಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಜನರು ನೀಡುವ ಅಹವಾಲುಗಳನ್ನು ದೆಹಲಿಗೆ ಕೊಂಡೊಯ್ದು, ಕಾಯ್ದೆಯನ್ನು ಆಮೂಲಾಗ್ರ ತಿದ್ದುಪಡಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
.ವಕ್ಫ್ ಆಸ್ತಿ: 75ಕ್ಕೂ ಹೆಚ್ಚು ಅಹವಾಲು ಆಲಿಸಿದ ಜಂಟಿ ಸಂಸದೀಯ ಸಮಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.