ಬೆಂಗಳೂರು: ‘ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ. ಅವರ ಒಳಜಗಳದಿಂದ ಸರ್ಕಾರ ಪತನವಾದರೆ ನಾವು ಹೊಸ ಸರ್ಕಾರ ರಚನೆಗೆ ಸಿದ್ಧರಿದ್ದೇವೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಈ ಕಾರಣಕ್ಕೆ ನಮ್ಮ ಶಾಸಕರು ರೆಸಾರ್ಟ್‌ನಲ್ಲಿ ಉಳಿದಿದ್ದಾರೆ. ಅಗತ್ಯ ಬಂದಾಗ ನಾವು ಅವರನ್ನು ಕರೆಸಿಕೊಳ್ಳುತ್ತೇವೆ’ ಎಂದರು

‘ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಇಷ್ಟಕ್ಕೂ ನಮಗೇನೂ ಕಾಯಿಲೆಯಿಲ್ಲ. ಆದರೆ, ಆಪರೇಷನ್ ಬೇಕಾಗಿರುವುದು ಮೈತ್ರಿ ಸರ್ಕಾರಕ್ಕೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಗೊಂದಲದ ಗೂಡಾಗಿ, ಅನಾರೋಗ್ಯದಿಂದ ಬಳಲುತ್ತಿದೆ. ಹೀಗಾಗಿ ಆಪರೇಷನ್ ಬೇಕಾಗಿದೆ’ ಎಂದು ಸದಾನಂದಗೌಡ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.