ಮಂಗಳೂರು: ಆರ್‌ಎಸ್ಎಸ್ ಕಾರ್ಯಕರ್ತ ಶರತ್ ಕುಮಾರ್ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಜುಲೈ 4ರಂದು ಬಿ.ಸಿ.ರೋಡ್‌ನಲ್ಲಿರುವ ಲಾಂಡ್ರಿಯಲ್ಲೇ ಶರತ್‌ಕುಮಾರ್ ಅವರ ಎದೆಗೆ ಚೂರಿಯಿಂದ ಇರಿದಿದ್ದ ದುಷ್ಕರ್ಮಿಗಳು, ಬೈಕ್‌ನಲ್ಲಿ ಪರಾರಿಯಾಗಿದ್ದರು. ಜುಲೈ 7ರಂದು ಆಸ್ಪತ್ರೆಯಲ್ಲಿ ಶರತ್‌ಕುಮಾರ್ ಮೃತಪಟ್ಟಿದ್ದರು. ದುಷ್ಕರ್ಮಿಗಳ ಪತ್ತೆಗಾಗಿ ತೀರ್ವ ಶೋಧ ನಡೆಸಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಐಜಿಪಿ ಹರಿಶೇಖರನ್ ಅವರು ಸುದ್ದಿಗೋಷ್ಠಿ ನಡೆಸಿದರು.

ಬಂಟ್ವಾಳದ ಅಬ್ದುಲ್ ಶಾಪಿ(36) ಹಾಗೂ ಚಾಮರಾಜನಗರ ಪಿ.ಎಫ್.ಐ ಸಂಘಟನೆಯ ಅಧ್ಯಕ್ಷ ಖಲೀಲ್‌ವುಲ್ಲಾ ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ವಿಚಾರಣೆ ಮತ್ತು ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ. ತಲೆ ಮರೆಸಿಕೊಂಡಿರುವ ಇತರೆ ಇಬ್ಬರು ಆರೋಪಿಗಳ ಸುಳಿವು ದೊರೆತಿದ್ದು, ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದರು.

ಪ್ರಕರಣದ ತನಿಖೆಯ ಭಾಗವಾಗಿ ಅಧಿಕಾರಿಗಳ ತಂಡವು 30 ಜನರನ್ನು ವಿಚಾರಣೆ ಒಳಪಡಿಸಿತ್ತು. ಆರೋಪಿಗಳ ಬಗ್ಗೆ ಖಚಿತ ಸುಳಿವು ಪತ್ತೆಮಾಡಿದ್ದ ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಮುಂಬೈನಲ್ಲಿ ಹಾಗೂ ಗೋವಾ ಮತ್ತು ಕೇರಳ ರಾಜ್ಯಗಳಲ್ಲೂ ಪ್ರತ್ಯೇಕ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.