ಧಾರವಾಡ: ಅವ್ಯವಹಾರಗಳ ಕುರಿತಂತೆ ಈ ಹಿಂದೆ ಭಾರಿ ಸುದ್ದಿ ಮಾಡಿದ್ದ ಇಲ್ಲಿನ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ ಈಗ ಮತ್ತೆ ಸುದ್ದಿಯಲ್ಲಿದೆ.

ಪಿಎಚ್.ಡಿ ಮುಗಿಸಿಕೊಡಲು ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ಕರ್ನಾ ಟಕ ವಿವಿಯ ಶಿಕ್ಷಣ ವಿಭಾಗದ ಡೀನ್ ಪ್ರೊ. ನೂರ್ಜಹಾನ್ ಗಣಿಹಾರ ರೂ4 ಲಕ್ಷ ಬೇಡಿಕೆ ಇಟ್ಟ ದೂರು ಈಗ ಲೋಕಾ ಯುಕ್ತ ಪೊಲೀಸ್ ಠಾಣೆ ಮಟ್ಟಿಲೇರಿದೆ.

ಪ್ರೊ.ಗಣಿಹಾರ ಅವರು ರೂ4 ಲಕ್ಷ ಬೇಡಿಕೆ ಇಟ್ಟಿದ್ದನ್ನು ಇಬ್ಬರು ವಿದ್ಯಾರ್ಥಿಗಳು ಕ.ವಿ.ವಿ ಕುಲಸಚಿವರ ಗಮನಕ್ಕೆ ತಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ತುರ್ತು ಸಿಂಡಿಕೇಟ್ ಸಭೆ ನಡೆದು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಅದರನ್ವಯ ಮಂಗಳವಾರ ಸಂಜೆ ದೂರು ದಾಖಲಾಗಿದೆ.

ಘಟನೆ ವಿವರ: ಕ.ವಿ.ವಿಯ ಶಿಕ್ಷಣ ವಿಭಾಗದಲ್ಲಿ ಪಿಎಚ್.ಡಿ ಪದವಿಗಾಗಿ ಜಮ್ಮು ಮತ್ತು ಕಾಶ್ಮೀರದ ಎಜಾಜ್ ಅಹ್ಮದ್ ನಾಯ್ಕ ಹಾಗೂ ಹುಬ್ಬಳ್ಳಿಯ ಶಬಿಯಾ ಎ.ಎಂ.ಖಾನ್ ನೋಂದಾಯಿಸಿಕೊಂಡಿದ್ದರು. ಪ್ರೊ.ಗಣಿಹಾರ ಇವರಿಗೆ ಮಾರ್ಗದರ್ಶಕರಾಗಿದ್ದರು. ಹಣದ ಬೇಡಿಕೆ ಕುರಿತಂತೆ ನಡೆಸಿದ ಮೊಬೈಲ್ ಸಂಭಾಷಣೆಯನ್ನು ವಿದ್ಯಾರ್ಥಿಗಳು ದಾಖಲಿಸಿಕೊಂಡಿದ್ದಾರೆ.

ಅದರಂತೆಯೇ ಮಾರ್ಚ್ 18ರಂದು ವಿದ್ಯಾರ್ಥಿಗಳು ಕ.ವಿ.ವಿ ಕುಲಸಚಿವರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಪ್ರೊ.ಗಣಿಹಾರ ಅವರಿಗೆ ಕಾರಣ ಕೇಳಿದ ನೋಟಿಸ್ ಜಾರಿ ಮಾಡಲಾಗಿತ್ತು ಜತೆಗೆ ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ಆದರೆ ಗಣಿಹಾರ ಉತ್ತರ ನೀಡಿದ್ದು ಮೇ 30ರಂದು. ಆದರೆ ಅದು ಸಮರ್ಪಕವಾಗಿಲ್ಲ ಎಂಬ ಅಂಶವನ್ನು ಕ.ವಿ. ವಿ ತನ್ನ ದೂರಿನಲ್ಲಿ ಹೇಳಿದೆ.

ಆರು ತಿಂಗಳ ನಂತರ ಭೇಟಿ: ಅಕ್ರಮ ನೇಮ ಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ರದ್ದು ಮಾಡಿದ ಹೈಕೋರ್ಟ್ನ ಆದೇಶಕ್ಕೂ ಮೊದಲು ತನಿಖೆ ನಡೆಸಲು ನಿತ್ಯ ಬರುತ್ತಿದ್ದ ಲೋಕಾಯುಕ್ತ ಪೊಲೀಸರು, ಕಳೆದ ಆರು ತಿಂಗಳಿಂದ ಇತ್ತ ಭೇಟಿ ನೀಡಿರಲಿಲ್ಲ. ಇದೀಗ ಲಂಚದ ಪ್ರಕರಣ ಕುರಿತಂತೆ ಮಾಹಿತಿ ಪಡೆಯಲು ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಎಸ್ಪಿ ಕೆ.ಪರಶುರಾಮ ಕ.ವಿ.ವಿ.ಗೆ ಭೇಟಿ ನೀಡಿದರು. ಘಟನೆ ಕುರಿತು ಪ್ರಭಾರ ಕುಲಪತಿ ಪ್ರೊ.ಎಸ್.ಎಸ್. ಹೂಗಾರ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಮಾಹಿತಿ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪರಶುರಾಮ, ‘ಪ್ರಕರಣ ಸುದ್ದಿಯಾಗಿರುವುದರಿಂದ ಅದನ್ನು ಆಧರಿಸಿ, ದೂರು ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತರು ಸೂಚಿಸಿದ್ದರು. ಅದರಂತೆಯೇ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ವಿದ್ಯಾರ್ಥಿಗಳು ನೀಡಿರುವ ಸಿ.ಡಿ.ಯನ್ನು ಪಡೆದು ಅದನ್ನು ಪರಿಶೀಲಿಸಲಾಗುವುದು’ ಎಂದರು.

‘ಪ್ರತಿಷ್ಠೆಗೆ ಮಸಿ’
ಬೆಂಗಳೂರು: ಲಂಚ ಆರೋಪದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಲಂಚ ಕೇಳಿದ ವಿಚಾರ ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಇಂಥ ಬೇಡಿಕೆಯು ಭ್ರಷ್ಟಾಚಾರ ಮಾತ್ರವಲ್ಲ, ಇದರಿಂದ ವಿ.ವಿ.ಯ ಪ್ರತಿಷ್ಠೆ ಕೂಡ ಕುಸಿಯುತ್ತದೆ’ ಎಂದು ಲೋಕಾಯುಕ್ತರು ಹೇಳಿದ್ದಾರೆ.

ಪ್ರಕರಣ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಮೂರ್ತಿ ರಾವ್ ಅವರು ಸೂಚಿಸಿದ್ದಾರೆ.

ಇದು ಕ್ರಿಮಿನಲ್ ಪ್ರಕರಣವಾದ್ದರಿಂದ ಲೋಕಾಯುಕ್ತದಲ್ಲಿ ದೂರು ದಾಖಲಿಸುವಂತೆ ಎಸ್ಪಿ ಹೇಳಿದ್ದಾರೆ. ಅದರಂತೆಯೇ ದೂರು ದಾಖಲಿಸಲು ಸೂಚಿಸಿದ್ದೇನೆ
ಪ್ರೊ.ಎಸ್.ಎಸ್.ಹೂಗಾರ, ಪ್ರಭಾರ ಕುಲಪತಿ, ಕ. ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.