ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ನೀಡುವ 2012ನೇ ಸಾಲಿನ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ’ಕ್ಕೆ ಮೂವರು ಲೇಖಕಿಯರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿಯು ತಲಾ ₨ 10 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಗುಲ್ಬರ್ಗದ ಡಾ.ವಸುಂಧರಾ ಭೂಪತಿ ಅವರ ಆರೋಗ್ಯ ಲೇಖನಗಳ ಸಂಗ್ರಹ ‘ಮೊಗ್ಗು ಅರಳುವಾಗ’ ಕೃತಿ, ಉಡುಪಿಯ ಪ್ರಜ್ಞಾ ಮಾರ್ಪಳ್ಳಿ ಅವರ ‘ಅಲೆಗಳು’ ಕಾದಂಬರಿ, ಬೆಂಗಳೂರಿನ ಪಿ.ಚಂದ್ರಿಕಾ ಅವರ ‘ತಾಮ್ರವರ್ಣದ ತಾಯಿ’ ಕವನ ಸಂಕಲನ ಕೃತಿಗಳು ಗ್ರಂಥ ಬಹುಮಾನಕ್ಕೆ ಆಯ್ಕೆಯಾಗಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.