ನಿಕಟಪೂರ್ವ ಸಮ್ಮೇಳನಾಧ್ಯಕ್ಷರನ್ನು ಒಳಬಿಡದ ಪೊಲೀಸರು!
ಗೌರವಯುತವಾಗಿ ಕರೆತರಬೇಕಿದ್ದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾ. ಡಿಸೋಜಾ ಅವರನ್ನು ಸಮ್ಮೇಳನ ನಡೆಯುವ ಮೈದಾನದ ವಿಐಪಿ ಬಾಗಿಲಲ್ಲಿ ಒಳಬಿಡದೇ ಸುಮಾರು 45 ನಿಮಿಷ ಬಿಸಿಲಿನಲ್ಲಿ ನಿಲ್ಲಿಸಿದ ಪ್ರಸಂಗಕ್ಕೂ ಸಮ್ಮೇಳನ ಸಾಕ್ಷಿಯಾಯಿತು.

ಎಷ್ಟೇ ಪರಿಪರಿಯಾಗಿ ‘ನಾನೇ ಹಿಂದಿನ ಸಮ್ಮೇಳನದ ಅಧ್ಯಕ್ಷ. ಆಹ್ವಾನ ಪತ್ರಿಕೆ ನೀಡಿದ್ದಾರೆ' ಎಂದು ಕೇಳಿಕೊಂಡರೂ ಪೊಲೀಸರು ಒಪ್ಪಲಿಲ್ಲ. ಕೊನೆಗೆ ಅಲ್ಲಿಂದಲೇ ಫೋನ್ ಮೂಲಕ ಪರಿಷತ್ತಿನ ಪದಾಧಿಕಾರಿಗಳನ್ನು ಅವರು ಸಂಪರ್ಕಿಸಿ ಮಾಹಿತಿ ನೀಡಿದರು. ನಂತರ ಹುಲಿಕಲ್ ನಟರಾಜ್ ಅವರು ಧ್ವನಿವರ್ಧಕದಲ್ಲಿ ‘ದಯವಿಟ್ಟು ನಾ. ಡಿಸೋಜಾ ಅವರನ್ನು ಪೊಲೀಸರು ಒಳಬಿಡಬೇಕು' ಎಂದು ಮನವಿ ಮಾಡಿಕೊಂಡ ನಂತರವಷ್ಟೇ ಅವರನ್ನು ಒಳಬಿಡಲಾಯಿತು.

ವೇದಿಕೆ ಬಳಿ ಬಂದ ಅವರನ್ನು ಒಳಬನ್ನಿ ಸರ್... ಎಂದು ಕೆಲವು ಪದಾಧಿಕಾರಿಗಳು ಕರೆದಾಗ ‘ನನಗೆ ಪೊಲೀಸರದ್ದೇ ಭಯ’ ಎಂದು ನಿಟ್ಟುಸಿರುಬಿಡುತ್ತಾ ವೇದಿಕೆಯತ್ತ ತೆರಳಿದರು.

ವೇದಿಕೆ ಬಳಿ ಗದ್ದಲ!
ಸಮ್ಮೇಳನ ಆರಂಭಗೊಳ್ಳುತ್ತಿದ್ದಂತೆ ಮಾಜಿ ಶಾಸಕರೊಬ್ಬರನ್ನು ವಿಐಪಿ ಗ್ಯಾಲರಿಗೆ ಒಳಬಿಡಲಿಲ್ಲ ಎಂಬ ಕಾರಣಕ್ಕೆ ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಇದರಿಂದ ಕೆಲಹೊತ್ತು ಆತಂಕದ ಸನ್ನಿವೇಶ ನಿರ್ಮಾಣವಾಯಿತು. ಕೊನೆಗೆ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಎಲ್ಲರನ್ನೂ ಸಮಾಧಾನಪಡಿಸಿದರು.

ಸುಳಿಯದ ದೇವೇಗೌಡ, ರೇವಣ್ಣ!
ತಮ್ಮದೇ ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪುತ್ರ ಶಾಸಕ ಎಚ್.ಡಿ. ರೇವಣ್ಣ ಆಹ್ವಾನಪತ್ರಿಕೆಯಲ್ಲಿ ಹೆಸರಿದ್ದರೂ ಸಮಾರಂಭದತ್ತ ಸುಳಿಯಲಿಲ್ಲ.

ಸ್ವಾಗತದಲ್ಲಿ ಏರುಪೇರು!
45 ನಿಮಿಷದಷ್ಟು ತಡವಾಗಿ ಆರಂಭವಾದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಸ್ವಾಗತ ಭಾಷಣ ಮಾಡಿದರು. ಆದರೆ, ಅವರು ನಲ್ಲೂರು ಪ್ರಸಾದ್ ಅವರನ್ನು ಸ್ವಾಗತಿಸುವುದನ್ನು ಮರೆತು ಬಹಳ ಹೊತ್ತಾದ ನಂತರ ‘ನಿಕಟಪೂರ್ವ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರಿಗೆ ಸ್ವಾಗತ ಕೋರುತ್ತೇನೆ' ಎಂದು ಹೇಳಿದರು. ಇದಲ್ಲದೇ ಶಾಸಕ ಎಚ್.ಡಿ. ರೇವಣ್ಣ ಸಮಾರಂಭದಕ್ಕೆ ಬಾರದೇ ಇದ್ದರೂ ಅವರಿಗೂ ಸ್ವಾಗತ ಕೋರುವ ಮೂಲಕ ಅಚ್ಚರಿ ಮೂಡಿಸಿದರು.

ತಡವಾಗಿ ಮೌನಾಚರಣೆ!
ಸರೋಜಿನಿ ಮಹಿಷಿ, ಆರ್.ಕೆ. ಲಕ್ಷ್ಮಣ್ ಹಾಗೂ ಇತರ ಗಣ್ಯರ ನಿಧನಕ್ಕೆ ಮೌನಾಚರಣೆ ಮಾಡುವುದೂ ಸಹ ತಡವಾಯಿತು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಆಶಯ ನುಡಿಗಳನ್ನು ಹೇಳಿದ ಬಳಿಕ ಮೌನಾಚರಣೆ ಮಾಡಲಾಯಿತು. ಅದರಲ್ಲೂ ಆರ್.ಕೆ. ಲಕ್ಷ್ಮಣ್ ಅವರ ಹೆಸರನ್ನು ಮರೆತದ್ದನ್ನು ಸಭಿಕರೇ ಕೂಗಿ ನಿರೂಪಕರಿಗೆ ನೆನಪಿಸಿದ ಪ್ರಸಂಗಕ್ಕೂ ಸಮಾರಂಭ ಸಾಕ್ಷಿಯಾಯಿತು.

ರಕ್ಷಣಾ ವೇದಿಕೆಗೆ ಮೀಸಲಾದ ಆಸನ!
ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾ. ಡಿಸೋಜಾ ಮೊದಲಾದ ವೇದಿಕೆ ಮೇಲಿದ್ದ ಗಣ್ಯರ ಕುಟುಂಬಸ್ಥರಿಗಾಗಿ ಎಂದೇ ಮೀಸಲಿಟ್ಟಿದ್ದ ವಿಐಪಿ ಆಸನಗಳ ಮೊದಲ ಎರಡು ಸಾಲುಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇತರೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೇ ಭರ್ತಿಯಾಗಿದ್ದರು. ಆದರೆ, ವೇದಿಕೆ ಮೇಲಿದ್ದ ಗಣ್ಯರ ಕುಟುಂಬದವರು ಹಿಂದಿನ ಸಾಲುಗಳಲ್ಲಿ ಕೂರಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.