ಜೆರುಸಲೇಂ: ಗಾಜಾದ ಕೇಂದ್ರದಲ್ಲಿ ಇಸ್ರೇಲ್ ನಡೆಸಿದ ಎರಡು ವಾಯುದಾಳಿಯಲ್ಲಿ ಶುಕ್ರವಾರ ಇಬ್ಬರು ಮಕ್ಕಳು, ನಾಲ್ವರು ಮಹಿಳೆಯರು ಸೇರಿ 12 ಮಂದಿ ಮೃತಪಟ್ಟಿದ್ದಾರೆ.

ರಫಾ ನಗರಕ್ಕೆ ಗಡಿಯಾದ ಇಲ್ಲಿ ಬಹುತೇಕ ಪ್ಯಾಲೆಸ್ಟೀನಿಯರು ನೆಲೆಸಿದ್ದಾರೆ. ಈಜಿಪ್ಟ್‌ಗೆ ಹೊಂದಿಕೊಂಡಂತೆ ಈ ಗಡಿಯುದ್ದಕ್ಕೂ ಇಸ್ರೇಲ್ ಸೇನೆಯು ಸುತ್ತುವರಿದಿದೆ.

ಇಸ್ರೇಲ್‌ನ ಸೇನೆ ತನ್ನ ದಾಳಿಯನ್ನು ತೀವ್ರಗೊಳಿಸುತ್ತಿದ್ದಂತೆ ಇಲ್ಲಿ ಆಶ್ರಯ ಪಡೆದಿದ್ದ 10 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಸುರಕ್ಷತೆ ಅರಸಿ ಗುಳೆಹೋಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಈ ಹಿಂದೆ ಬೇರೆಡೆಯಿಂದ ಇಲ್ಲಿಗೆ ವಲಸೆ ಬಂದಿದ್ದವರೇ ಆಗಿದ್ದಾರೆ.

ಯುದ್ಧಪೀಡಿತ ಪ್ರದೇಶದಲ್ಲಿ ಹೆಚ್ಚಿನವರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಪರಿಹಾರ ಕಾರ್ಯಗಳಲ್ಲಿ ನಿರತರಾಗಿರುವ ವಿಶ್ವಸಂಸ್ಥೆಯ ಪ್ರಕಾರ, ಈ ಪ್ರದೇಶದಲ್ಲಿ ಅಗತ್ಯ ವಸ್ತುಗಳಾದ ಆಹಾರ, ನೀರು, ಇತರೆ ಮೂಲಸೌಲಭ್ಯಗಳ ಕೊರತೆಯಾಗಿದೆ.

ಯಮೆನ್‌ನಲ್ಲಿ ಹೂಥಿ ಬಂಡುಕೋರರನ್ನು ಗುರಿಯಾಗಿಸಿ ಬ್ರಿಟನ್, ಅಮೆರಿಕ ನಡೆಸಿದ ವಾಯುದಾಳಿಯಲ್ಲಿ 16 ಮಂದಿ ಸತ್ತಿದ್ದು, 35 ಮಂದಿ ಗಾಯಗೊಂಡರು ಎಂದು ವರದಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.