ಕರಾಚಿ: ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಚಮನ್ ಜೈಲಿನಿಂದ ಈದ್ ಉಲ್ ಅಧಾ ಪ್ರಾರ್ಥನೆಯ ವೇಳೆ 17 ಕೈದಿಗಳು ಪರಾರಿಯಾಗಿದ್ದು, ಈ ಸಂದರ್ಭ ಜೈಲು ಸಿಬ್ಬಂದಿ ಹಾರಿಸಿದ ಬಂದೂಕಿನ ಗುಂಡಿಗೆ ಕೈದಿಯೊಬ್ಬ ಮೃತಪಟ್ಟಿದ್ದಾನೆ.

‘ಪರಾರಿಯ ವೇಳೆ ಜೈಲಿನ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಕೆಲವು ಸಿಬ್ಬಂದಿ ಸೇರಿದಂತೆ ಕೈದಿಗಳು ಗಾಯಗೊಂಡಿದ್ದಾರೆ’ ಎಂದು ಬಲೂಚಿಸ್ತಾನ್ ಬಂಧಿಖಾನೆಯ ಐಜಿ ಮಲಿಕ್ ಶುಜಾ ಕಾಸಿ ತಿಳಿಸಿದ್ದಾರೆ.

‘ಈದ್ ಪ್ರಾರ್ಥನೆ ಸಮಯದಲ್ಲೇ ಪರಾರಿಯಾಗಲು ಕೈದಿಗಳು ಯೋಜನೆ ರೂಪಿಸಿಕೊಂಡಿದ್ದಾರೆ. ಅದರಂತೆ ಗುರುವಾರ ಪ್ರಾರ್ಥನೆಗಾಗಿ ಅವಕಾಶ ಕೊಡುತ್ತಿದ್ದಂತೆ, ಜೈಲು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದರಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದವರು ಸೇರಿದ್ದಾರೆ’ ಎಂದಿದ್ದಾರೆ.

‘ಹೊರಗಿನವರ ಸಹಕಾರ ಪಡೆದು ಪರಾರಿಯಾಗುವಲ್ಲಿ ಕೈದಿಗಳು ಯಶಸ್ವಿಯಾಗಿದ್ದಾರೆ’ ಎಂದು ಖಾಸಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.