ಅಲ್ಬುಕ್ವೆರ್ಕ್: ವಾಯುವ್ಯ ಮೆಕ್ಸಿಕೊದ ವನ್ಯಜೀವಿ ನಿರ್ವಹಣೆಯ ವಿಶೇಷ ತಂಡವು ಅರಣ್ಯದಲ್ಲಿ ಅನಧಿಕೃತ ಪ್ರಾಣಿಗಳನ್ನು ತೊಡೆದುಹಾಕುವ ಕಾರ್ಯಾಚರಣೆ ಅಡಿಯಲ್ಲಿ 19 ಹಸುಗಳನ್ನು ಗುಂಡು ಹಾರಿಸಿ ಕೊಂದು ಹಾಕಿದೆ. ವೈಮಾನಿಕ ಕಾರ್ಯಾಚರಣೆ ಮೂಲಕ ಹಸುಗಳನ್ನು ಕೊಲ್ಲಲಾಗಿದೆ.

ಮೂರು ದಿನಗಳ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ ಮತ್ತು ರೈಫಲ್ಗಳನ್ನು ಬಳಸಲಾಗಿದೆ. ಈ ಹಸುಗಳು ವನ್ಯಜೀವಿಗಳ ಆವಾಸಸ್ಥಾನವನ್ನು ತುಳಿದು ಹಾನಿಗೊಳಿಸುತ್ತಿದ್ದವು ಮತ್ತು ನೀರಿನ ಗುಣಮಟ್ಟವನ್ನು ಹಾಳುಮಾಡುತ್ತಿದ್ದವು ಎಂದು ಫೆಡರಲ್ ಅಧಿಕಾರಿಗಳು ಹಾಗೂ ಪರಿಸರವಾದಿಗಳು ಹೇಳುತ್ತಾರೆ.

ಗಿಲಾ ನದಿ ಸುತ್ತಮುತ್ತ ಸುಮಾರು 150 ಅನಧಿಕೃತ ಹಸುಳು ಇರುವ ಸಾಧ್ಯತೆ ಇದೆ ಎಂದು ಅಮೆರಿಕದ ಅರಣ್ಯ ಇಲಾಖೆ ತಿಳಿಸಿದೆ.

ಈ ಭಾಗದಲ್ಲಿ ಅನಧಿಕೃತ ಹಸುಗಳಿಗಾಗಿ ಹುಡುಕಾಟ ನಡೆಸಿದ ಸಿಬ್ಬಂದಿ ಗಮನಾರ್ಹ ಸಂಖ್ಯೆಯ ಎಲ್ಕ್, ಜಿಂಕೆ, ಜಾವೆಲಿನಾ ಮತ್ತು ಮೊಲಗಳನ್ನು ಗುರುತಿಸಿದ್ದಾರೆ.

ಹಸುಗಳನ್ನು ಕೊಲ್ಲುವುದರ ಬದಲು ಅವುಗಳನ್ನು ಅರಣ್ಯದಿಂದ ಹೊರಗೆ ಕಳುಹಿಸುವುದು ಮಾನವೀಯ ಮಾರ್ಗವಾಗಿತ್ತು ಎಂದು ಕಾರ್ಯಾಚರಣೆ ವಿರೋಧಿಸುವವರ ಅಭಿಪ್ರಾಯವಾಗಿದೆ. ಅರಣ್ಯ ಸೇವೆಯ ಅಧಿಕಾರಿಗಳು ತನ್ನದೇ ಆದ ನೀತಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿದ್ದು, ಫೆಡರಲ್ ನ್ಯಾಯಾಧೀಶರು ಯೋಜನೆಯನ್ನು ರದ್ದು ಮಾಡಬೇಕೆಂಬ ಅವರ ಮನವಿಯನ್ನು ತಳ್ಳಿಹಾಕಿದ್ದಾರೆ. ಅರಣ್ಯ ಸಿಬ್ಬಂದಿಗೆ ಅನಧಿಕೃತ ಹಸುಗಳನ್ನು ಕೊಲ್ಲುವ ಅಧಿಕಾರವಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.