ಝುಝೌ (ಚೀನಾ): ‘ಚೀನಾ ರಾಜಧಾನಿ ಬೀಜಿಂಗ್ನಲ್ಲಿ ಶನಿವಾರದಿಂದ ಇಲ್ಲಿಯವರೆಗೆ 744.8 ಮಿಲಿಮೀಟರ್ನಷ್ಟು (29.3 ಇಂಚು) ಮಳೆಯಾಗಿದ್ದು, ಇದು 140 ವರ್ಷದಲ್ಲೇ ಅಧಿಕವಾಗಿದೆ’ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.

‘ಡೊಕ್ಸುರಿ ಚಂಡಮಾರುತವು ದಕ್ಷಿಣ ಚೀನಾ ಪ್ರಾಂತ್ಯದಿಂದ ಉತ್ತರ ಚೀನಾದ ಕಡೆಗೆ ಚಲಿಸಿದ ಪರಿಣಾಮ ಬೀಜಿಂಗ್ ಹಾಗೂ ಹೆಬೈ ಸುತ್ತಮುತ್ತ ದಾಖಲೆ ಪ್ರಮಾಣದ ಮಳೆಯಾಗಿದೆ. ಪ್ರವಾಹದಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಕುಡಿಯುವ ನೀರನ್ನು ಪೂರೈಸುವ ಪೈಪ್ಗಳಿಗೂ ಹಾನಿಯಾಗಿದೆ’ ಎಂದು ಹೇಳಿದೆ.

ಪ್ರವಾಹದಿಂದಾಗಿ ಹೆಬೈ ಪ್ರಾಂತ್ಯದ ಝುಝೌನಲ್ಲಿ ಭಾರಿ ಹಾನಿ ಸಂಭವಿಸಿದೆ. ‘ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಲೈಟ್ಗಳ ನೆರವನ್ನು ನೀಡಿ’ ಎಂದು ಪೊಲೀಸರು ಮಂಗಳವಾರ ರಾತ್ರಿ ಮನವಿ ಮಾಡಿದ್ದರು.

ಝುಝೌ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಮಾಹಿತಿ ಇದುವರೆಗೂ ತಿಳಿದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.