ವಾಷಿಂಗ್ಟನ್:ಅಮೆರಿಕದ ಐಒವಾ ರಾಜ್ಯದ ಪಾರ್ಕ್ವೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಮತ್ತೊಂದು ಗುಂಡಿನ ದಾಳಿ ಪ್ರಕರಣ ವರದಿಯಾಗಿದೆ. ಈ ವೇಳೆಮೂವರು ಸಾವಿಗೀಡಾಗಿದ್ದಾರೆ. ದಾಳಿಕೋರನೂಮೃತಪಟ್ಟಿದ್ದಾನೆ ಎಂದುಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಜಾಕ್ಸನ್ ಕೌಂಟಿಯ ಮಕ್ವೊಕೆಟಾ ಕೇವ್ಸ್ ಸ್ಟೇಟ್ ಪಾರ್ಕ್ನಲ್ಲಿ ಬೆಳಿಗ್ಗೆ 6.23ರ ಸುಮಾರಿಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿತು ಎಂದುಪೊಲೀಸರ ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ 'ಕ್ಸಿನುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಳಿಕೋರ ಅಂಥೋನಿ ಅರ್ನಾಲ್ಡೊ ಶೆರ್ವಿನ್ (23) ಎಂಬಾತನ ಶವ ಪಾರ್ಕ್ನ ಪಶ್ಚಿಮ ಭಾಗದಲ್ಲಿ ಪತ್ತೆಯಾಗಿದೆ. ಆತ ತನಗೆ ತಾನೇ ಗುಂಡು ಹೊಡೆದುಕೊಂಡ ಸ್ಥಿತಿಯಲ್ಲಿ ಶವ ಕಂಡುಬಂದಿದೆ.

ಸಾರ್ವಜನಿಕರು ಪಾರ್ಕ್ಗೆ ಭೇಟಿ ನೀಡುವುದನ್ನುಮುಂದಿನ ಆದೇಶದ ವರೆಗೆ ನಿರ್ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಈ ವರ್ಷ ನಡೆದ ಗುಂಡಿನ ದಾಳಿ ಪ್ರಕರಣಗಳಿಂದಾಗಿ ಇದುವರೆಗೆ 24 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬುದು 'ಗನ್ ವಯಲೆನ್ಸ್ ಆರ್ಕೈವ್'ಅಂಕಿಅಂಶಗಳಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.