ಇಸ್ಲಾಮಾಬಾದ್: ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ, ಪಾಕಿಸ್ತಾನವು ತನ್ನ ದೇಶದ ಜೈಲಿನಲ್ಲಿರುವ 308 ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತೀಯ ಹೈಕಮಿಷನ್ಗೆ ಶನಿವಾರ ಹಸ್ತಾಂತರಿಸಿದೆ. ಇವರಲ್ಲಿ 42 ಮಂದಿ ನಾಗರಿಕ ಕೈದಿಗಳಾಗಿದ್ದರೆ, 266 ಮಂದಿ ಮೀನುಗಾರರು.

‘2008ರ ರಾಜತಾಂತ್ರಿಕ ಪರವಾನಗಿ ಒಪ್ಪಂದಕ್ಕೆ ಅನ್ವಯ ಈ ಪಟ್ಟಿಯನ್ನು ಹಸ್ತಾಂತರಿಸಲಾಗಿದೆ’ ಎಂದು ವಿದೇಶಾಂಗ ಕಚೇರಿ (ಎಫ್ಒ) ತಿಳಿಸಿದೆ.

‘ಭಾರತವು ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ಗೆ ಪಾಕಿಸ್ತಾನಿ ಕೈದಿಗಳ ಪಟ್ಟಿಯನ್ನು ನೀಡಿದ್ದು, ಅದರಲ್ಲಿ 417 ಕೈದಿಗಳ ಹೆಸರಿವೆ. ಇವರಲ್ಲಿ 343 ಮಂದಿ ನಾಗರಿಕ ಕೈದಿಗಳಿದ್ದರೆ, 74 ಮಂದಿ ಮೀನುಗಾರರಿದ್ದಾರೆ’ ಎಂದು ಎಫ್ಒ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.