ಗಾಜಾಪಟ್ಟಿ: ಹಿಜ್ಬುಲ್ಲಾ ಉಗ್ರರು ನಮ್ಮ ಸೇನಾ ನೆಲೆ ಮೇಲೆ ಡ್ರೋನ್ ದಾಳಿ ಮಾಡಿ ತನ್ನ ನಾಲ್ವರು ಯೋಧರನ್ನು ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.

ಭಾನುವಾರ ಸಂಜೆ ಬಿನ್ಯಾಮಿನಾ ಸಿಟಿಯ ಸೇನಾ ನೆಲೆ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ 7 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಇಸ್ರೇಲ್ ಲೆಬನಾನ್ ಮೇಲೆ ಭೂ ದಾಳಿ ಮಾಡಿದ ನಂತರ ಹಿಜ್ಬುಲ್ಲಾ ಕಡೆಯಿಂದ ನಡೆದ ಈ ದಾಳಿ ಅತ್ಯಂತ ದೊಡ್ಡದು ಎಂದು ವಿಶ್ಲೇಷಿಸಲಾಗಿದೆ.

ಗುರುವಾರ ಇಸ್ರೇಲ್ ನಡೆಸಿದ ದಾಳಿಗೆ ಲೆಬನಾನ್ನ 22 ಜನ ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾ ತಿಳಿಸಿದೆ.

ಇನ್ನೊಂದೆಡೆ ಗಾಜಾಪಟ್ಟಿಯ ಉತ್ತರ ಭಾಗವನ್ನು ಹಾಗೂ ಗಾಜಾ ನಗರವನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಇಸ್ರೇಲ್ ಸೇನೆಯು ಪ್ಯಾಲೆಸ್ಟೀನಿಯನ್ನರಿಗೆ ಹೊಸ ಆದೇಶ ಹೊರಡಿಸಿದೆ.

ಈ ಭಾಗದ ಆಸ್ಪತ್ರೆಗಳಲ್ಲಿನ ರೋಗಿಗಳೂ ಸ್ಥಳಾಂತರಗೊಳ್ಳಬೇಕು ಎಂದೂ ಇಸ್ರೇಲ್ ತಿಳಿಸಿದೆ. ಆದರೆ, ಯಾವ ದಿನಾಂಕದಲ್ಲಿ ಪ್ರಕ್ರಿಯೆ ನಡೆಯಬೇಕು ಎಂಬುದನ್ನು ಖಚಿತವಾಗಿ ತಿಳಿಸಿಲ್ಲ. ‘ನಮ್ಮನ್ನು ಇಲ್ಲಿಂದ ಓಡಿಸಿ, ತಮ್ಮ ಸೇನಾ ನೆಲೆ ಸ್ಥಾಪಿಸಿ, ಯಹೂದಿಗಳನ್ನು ಇಲ್ಲಿ ನೆಲೆಯೂರಿಸಬೇಕು ಎಂದು ಇಸ್ರೇಲ್ ಬಯಸಿದೆ’ ಎಂದು ಪ್ಯಾಲೆಸ್ಟೀನಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.