ಕ್ಯಾಲಿಫೋರ್ನಿಯಾ: ಇಲ್ಲಿನ ತುಲಾರೆ ಕೌಂಟಿಯ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು, 17 ವರ್ಷದ ತಾಯಿ ಮತ್ತು ಅವರ 6 ತಿಂಗಳ ಮಗು ಸೇರಿದಂತೆ ಮನೆಯಲ್ಲಿದ್ದ ಆರು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡಿನ ಸದ್ದು ಕೇಳಿದ ಸ್ಥಳೀಯರೊಬ್ಬರು ನಮಗೆ ದೂರು ನೀಡಿದ್ದರು. ಸೋಮವಾರ ಮುಂಜಾನೆ 4 ಗಂಟೆಗೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದಾಗ ತನ್ನ ತೋಳಿನಲ್ಲಿ ಮಗು ಎತ್ತಿಕೊಂಡಿದ್ದ ತಾಯಿಯನ್ನು ಹತ್ಯೆ ಮಾಡಿ ಮನೆಯ ಹೊರಗೆ ಶವ ಎಸೆಯಲಾಗಿತ್ತು. ಇಬ್ಬರ ತಲೆಗೂ ಗುಂಡೇಟು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಯಿ, ಮಗುವಿನ ಶವ ಮನೆಯ ಬಾಗಿಲಿನಲ್ಲಿತ್ತು. ಮಹಿಳೆ ಸೇರಿದಂತೆ ಇನ್ನೂ ಮೂವರು ಮನೆಯ ಒಳಗಿದ್ದರು. ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಗೆ ಕರೆದೊಯ್ದ ನಂತರ ಸಾವಿಗೀಡಾಗಿದ್ದಾರೆ. ಮನೆಯಲ್ಲಿದ್ದ ಮತ್ತಿಬ್ಬರು ಮಹಿಳೆಯರು ಹತ್ತಿರದ ಸ್ಥಳದಲ್ಲಿ ಅಡಗಿಕೊಂಡು ದಾಳಿಯಿಂದ ಬದುಕುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದು ಯಾದೃಚ್ಛಿಕ ಹಿಂಸಾಚಾರವಲ್ಲ. ಬದಲಿಗೆ ವ್ಯವಸ್ಥಿತವಾದ ದಾಳಿಯಂತೆ ಕಾಣುತ್ತಿದೆ. ವೈಯಕ್ತಿಕ ದ್ವೇಷವಿರಬಹುದು. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.