ಸೋಲ್: ಅಮೆರಿಕ ವಿರುದ್ಧ ಹೋರಾಡಲು ಸುಮಾರು 8 ಲಕ್ಷ ನಾಗರಿಕರು ಸೇನೆಗೆ ಸೇರಲು ಸನ್ನದ್ಧರಾಗಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

ಅಮೆರಿಕ ವಿರುದ್ಧ ಹೋರಾಟ ನಡೆಸಲು ವಿದ್ಯಾರ್ಥಿಗಳು ಸೇರಿದಂತೆ ಕಾರ್ಮಿಕರು ಸ್ವಇಚ್ಛೆಯಿಂದ ಮುಂದೆ ಬಂದಿದ್ದಾರೆ ಎಂದು ಉತ್ತರ ಕೊರಿಯಾದ ದಿನಪತ್ರಿಕೆಯೊಂದು ವರದಿ ಮಾಡಿದೆ.

ಶತ್ರುಗಳನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿರುವಂತೆ ಕಳೆದ ವಾರ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತಮ್ಮ ಸೇನೆಗೆ ಆದೇಶಿಸಿದ್ದರು.

ಅಮೆರಿಕ ಹಾಗೂ ದಕ್ಷಿಣ ಕೊರಿಯಾವು ಸಮರಾಭ್ಯಾಸ ಪ್ರಾರಂಭಿಸಿದ ಮರುದಿನವೇ ಉತ್ತರ ಕೊರಿಯಾವು ಮಂಗಳವಾರ ಕಡಿಮೆ ವ್ಯಾಪ್ತಿಯ ಎರಡು ಗುರುತ್ವಬಲ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಈ ಎಲ್ಲ ಬೆಳವಣಿಗೆಗಳ ಬಳಿಕ ನಾಗರಿಕರು ಸೇನೆಗೆ ಸೇರಲು ಸಿದ್ಧರಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿಕೆ ನೀಡಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

‘ಜಂಗ್ಯೋನ್ ನಗರದ ಕರಾವಳಿ ಪ್ರದೇಶದಿಂದ ಕ್ಷಿಪಣಿಗಳ ಪರೀಕ್ಷೆ ನಡೆದಿದೆ. ಈ ಕ್ಷಿಪಣಿಗಳು ಉತ್ತರ ಕೊರಿಯಾ ಮೂಲಕ ನಮ್ಮ ದೇಶದ ಪೂರ್ವ ಕರಾವಳಿ ಭಾಗದಲ್ಲಿ ಬಂದು ಬಿದ್ದಿದೆ. ಎರಡೂ ಕ್ಷಿಪಣಿಗಳು ಸುಮಾರು 620 ಕಿ.ಮೀ ಚಲಿಸಿವೆ’ ಎಂದು ದಕ್ಷಿಣ ಕೊರಿಯಾದ ಜಂಟಿ ಸೇನಾ ಮುಖ್ಯಸ್ಥ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಇಲ್ಲಿ ಅಮೆರಿಕದ 28 ಸಾವಿರ ಸೈನಿಕರಿದ್ದಾರೆ. ಇದೊಂದು ‘ಗಂಭೀರ ಪ್ರಚೋದನೆ’ ಎಂದು ತಾನು ಭಾವಿಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.