ಬಾಕು (ಅಜರ್ಬೈಜಾನ್): ತೀವ್ರ ಶಾಖ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ತಿಂಗಳುಗಳವರೆಗೆ ಶಾಲೆಗಳು ಬಂದ್ ಆಗಿದ್ದ ಪೂರ್ವ ಆಫ್ರಿಕಾದ ಮಕ್ಕಳು, ತಮ್ಮ ಶಿಕ್ಷಣ ಹಾಗೂ ಭವಿಷ್ಯವನ್ನು ಕಾಪಾಡುವಂತೆ ವಿಶ್ವ ನಾಯಕರಿಗೆ ಮನವಿ ಮಾಡಿದ್ದಾರೆ.

ತಾಪಮಾನ ಬದಲಾವಣೆ ಕುರಿತಂತೆ ಅಜರ್ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ವಾರ್ಷಿಕ 'ಸಿಒಪಿ29' ಶೃಂಗಸಭೆಯಲ್ಲಿ ಶಿಕ್ಷಣ ವಂಚಿತ ಮಕ್ಕಳು ಪಾಲ್ಗೊಂಡಿದ್ದರು.

ತಾನು ವಾಸಿಸುವ ಪ್ರದೇಶದಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಟಿದ್ದ ಕಾರಣ ಏಪ್ರಿಲ್ನಲ್ಲಿ ಎರಡು ವಾರ ಶಾಲೆ ತಪ್ಪಿಸಿಕೊಂಡಿದ್ದ ದಕ್ಷಿಣ ಸುಡಾನ್ನ 17 ವರ್ಷದ ಸೈಮಾ, 'ನಮ್ಮದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಹಾಗಾಗಿ, ತಾಪಮಾನ ವೈಪರೀತ್ಯ ನಿರೋಧಕ ಕಟ್ಟಡಗಳಾಗಲಿ, ಶಾಲೆಗಳಲ್ಲಿ ಹವಾ ನಿಯಂತ್ರಿತ ಸಾಧನಗಳಾಗಲಿ ಇಲ್ಲ' ಎಂದು ಹೇಳಿದ್ದಾರೆ.

ಏಷ್ಯಾದಿಂದ ಆಫ್ರಿಕಾ ವರೆಗೆ, ಈ ವರ್ಷ ತೀವ್ರ ತಾಪಮಾನದ ಕಾರಣ 4 ಕೋಟಿಗೂ ಹೆಚ್ಚು ಮಕ್ಕಳು ತರಗತಿಗಳಿಂದ ದೂರ ಉಳಿದಿದ್ದಾರೆ.

14 ವರ್ಷದ ನವೋಮಿ, 'ಈ ವರ್ಷ ರಾಷ್ಟ್ರ ಮಟ್ಟದ ಪರೀಕ್ಷೆ ಬರೆಯುತ್ತಿದ್ದೇನೆ. ತೀವ್ರ ತಾಪದಿಂದಾಗಿ ಶಾಲೆ ತಪ್ಪಿಸಿಕೊಳ್ಳುತ್ತಿರುವುದರಿಂದ ತೊಂದರೆಯಾಗಲಿದೆ' ಎಂದು ಬೇಸರಪಟ್ಟುಕೊಂಡಿದ್ದಾರೆ.

'ಮನೆಗಳಲ್ಲಿ ಓದಿನ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ತಾಪ ತೀವ್ರವಾಗಿರುವುದರಿಂದ, ದೇಹದ ಉಷ್ಣಾಂಶ ನಿಯಂತ್ರಿಸಿಕೊಳ್ಳಲು ಪ್ರತಿ ಎರಡು ಗಂಟೆಗೆ ಒಮ್ಮೆಯಾದರೂ ಸ್ನಾನ ಮಾಡುವುದಕ್ಕೆ ಒತ್ತು ನೀಡುವಂತಾಗಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.

ಸೊಮಾಲಿಯಾದ 16 ವರ್ಷದ ಬಾಲಕಿ ನಫಿಸೊ ಎಂಬವರು, ಭವಿಷ್ಯವನ್ನು ನೆನೆದರೆ ಇಡೀ ರಾತ್ರಿ ನಿದ್ರೆಯೇ ಬರುವುದಿಲ್ಲ ಎಂದು ಆತಂಕದಿಂದ ಹೇಳಿಕೊಂಡಿದ್ದಾರೆ.

'ನನ್ನ ತಂದೆ ರೈತ. ವಾತಾವರಣದಲ್ಲಿ ತಾಪಮಾನ ಜಾಸ್ತಿಯಾದಾಗ ಬರ ಆವರಿಸುತ್ತದೆ. ಅಗತ್ಯಕ್ಕಿಂತ ಹೆಚ್ಚು ಮಳೆ ಸುರಿದರೆ, ಆಹಾರ ಸಂಗ್ರಹಿಸುವುದೇ ಕಷ್ಟವಾಗುತ್ತದೆ. ಕೆಲವೊಮ್ಮೆ, ಮೂರೊತ್ತಿಗೆ ಸಾಕಾಗುವಷ್ಟು ಊಟವೂ ಸಿಗುವುದಿಲ್ಲ' ಎಂದು ನೊಂದುಕೊಂಡಿದ್ದಾರೆ.

'ದೇಶದಲ್ಲಿ ಹವಾ ನಿಯಂತ್ರಿತ ಶಾಲೆಗಳನ್ನು ನಿರ್ಮಿಸಲು 'ಹವಾಮಾನ ಹಣಕಾಸು' ಇಲ್ಲದಿದ್ದರೆ, ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ನಮ್ಮ ಭವಿಷ್ಯ ಹೇಗಿರಲಿದೆ ಎಂಬುದು ತುಂಬಾ ಚಿಂತೆಗೀಡು ಮಾಡಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.