ಯಾಂಗೋನ್ (ಎಎಫ್‌ಪಿ): ಗ್ರಾಮವೊಂದರ ಮೇಲೆ ವಾಯುದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿರುವುದಾಗಿ ಮ್ಯಾನ್ಮಾರ್‌ನ ಸೇನಾ ಆಡಳಿತವು ಒಪ್ಪಿಕೊಂಡಿದೆ.

ಸೇನಾ ಆಡಳಿತದ ಈ ಕ್ರಮವನ್ನು ವಿಶ್ವಸಂಸ್ಥೆ ಸೇರಿ ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ.

ಸಗೈಂಗ್ ಪ್ರದೇಶದ ಕಂನ್ಬಲು ಎಂಬ ಚಿಕ್ಕ ಪಟ್ಟಣದ ಬಳಿಯ ಗ್ರಾಮವೊಂದರ ಮೇಲೆ ಮಂಗಳವಾರ ಬೆಳಿಗ್ಗೆ ಈ ವಾಯುದಾಳಿ ನಡೆದಿದೆ. ಸುಮಾರು 50ಕ್ಕೂ ಹೆಚ್ಚು ಜನರು ಮೃತಪಟ್ಟು, 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಾವಿನ ಸಂಖ್ಯೆ ಕುರಿತು ನಿಖರ ಮಾಹಿತಿ ದೊರೆತಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಈ ಕೃತ್ಯವನ್ನು ಖಂಡಿಸಿರುವ ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್, ನೃತ್ಯ ಪ್ರದರ್ಶನ ನೀಡುತ್ತಿದ್ದ ಮಕ್ಕಳೂ ವಾಯುದಾಳಿಯಲ್ಲಿ ಹತರಾಗಿದ್ದಾರೆ. ಈ ಕ್ರೂರ ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

2021ರಲ್ಲಿ ಆಂಗ್ ಸನ್ ಸೂಕಿ ನೇತೃತ್ವದ ಮ್ಯಾನ್ಮಾರ್ ಸರ್ಕಾರವನ್ನು ಬೀಳಿಸಿದ ಬಳಿಕ ಸೇನೆ ನಡೆಸಿರುವ ವಿವಿಧ ದಾಳಿಗಳಲ್ಲಿ ಈವರೆಗೆ 3,200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪರಿವೀಕ್ಷಣಾ ತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.