ಇಸ್ತಾಂಬುಲ್: ಟರ್ಕಿಯ ಗುಹೆಯೊಂದರಲ್ಲಿ ಅಪಾಯದಲ್ಲಿ ಸಿಲುಕಿದ್ದ ಅಮೆರಿಕ ಮೂಲದ ಅನ್ವೇಷಕರೊಬ್ಬರನ್ನು 8 ದೇಶಗಳ 182 ಜನರ ರಕ್ಷಣಾ ತಂಡ ರಕ್ಷಿಸಿದೆ.

ಟರ್ಕಿಯ ಟಾರುಸ್ ಎಂಬ ಗುಡ್ಡಗಾಡು ಪ್ರದೇಶದ ಮೋರ್ಕಾ ಗುಹೆಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷ ವಯಸ್ಸಿನ ಅನ್ವೇಷಕ ಮಾರ್ಕ್ ಡಿಕ್ಕಿ ಎನ್ನುವರನ್ನು ಮಂಗಳವಾರ ಬೆಳಿಗ್ಗೆ ರಕ್ಷಿಸಲಾಗಿದೆ.

ಆಗಸ್ಟ್ 31 ರಂದು ನಿಗೂಢ ಮೋರ್ಕಾ ಗುಹೆಯ ಅನ್ವೇಷಣೆಗೆ ಹೋಗಿದ್ದ ಡಿಕ್ಕಿ, 5 ದಿನದ ನಂತರ 3 ಸಾವಿರ ಅಡಿ ಆಳದಿಂದ ಹೊರಗಿನ ಸಂಪರ್ಕ ಕಳೆದುಕೊಂಡಿದ್ದರು. ಆತನ ಮೇಲೆ ನಿಗಾ ವಹಿಸಿದ್ದ ನ್ಯೂ ಜೆರ್ಸಿಯ Sussex County ಎಂಬ ಸಂಸ್ಥೆಯೊಂದು ಟರ್ಕಿ ರಕ್ಷಣಾ ಪಡೆಗೆ ಮಾಹಿತಿ ನೀಡಿ ಸಹಾಯಯಾಚಿಸಿತ್ತು.

ಕೂಡಲೇ ಮೋರ್ಕಾ ಗುಹೆಗೆ ತೆರಳಿದ ಪರಿಹಾರ ಕಾರ್ಯಾಚರಣೆ ತಂಡ, ಭಾರಿ ಆಳದಲ್ಲಿ ಸಿಲುಕಿರುವ ಡಿಕ್ಕಿ ಅವರನ್ನು ಕರೆತರುವುದು ಸವಾಲಿನ ಕೆಲಸವೆಂದು ಮನಗಂಡಿತ್ತು. ಇಟಲಿ, ಹಂಗೇರಿ, ಬಲ್ಗೇರಿಯಾ, ಉಕ್ರೇನ್, ಪೋಲ್ಯಾಂಡ್ ಹಾಗೂ ಇಂಗ್ಲೆಂಡ್ ಸೇರಿದಂತೆ 8 ದೇಶಗಳ ತಜ್ಞರಿಂದ 182 ಜನ ಒಡಗೂಡಿ ಡಿಕ್ಕಿ ಅವರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.

ಡಿಕ್ಕಿ ಅವರನ್ನು ಗುಹೆಯಲ್ಲಿ ಪತ್ತೆ ಹಚ್ಚುವುದು ತುಂಬಾ ಕಷ್ಟವಾಗಿತ್ತು. ಕೆಲವು ಕಡೆ ಗುಹಾ ಗೋಡೆಗಳನ್ನು ಕತ್ತರಿಸಲಾಯಿತು. ಡಿಕ್ಕಿ ಅವರು ಪತ್ತೆಯಾದ ನಂತರು ಅವರು ತೀವ್ರ ನಿತ್ರಾಣರಾಗಿದ್ದರು. ತೀರಾ ರಕ್ತಹೀನತೆಯಿಂದ ಬಳಲುತ್ತಿದ್ದರು. ಕೂಡಲೇ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಟರ್ಕಿಯ ಸ್ಪೀಲೋಲಾಜಿಕಲ್ ಫೆಡರೇಶನ್ ವಕ್ತಾರ ಯಾಮನ್ ಒಜಾಕಿನ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಂತರ ಪ್ರತಿಕ್ರಿಯಿಸಿರುವ ಡಿಕ್ಕಿ ಅವರು, ’ಓ ಮೈ ಗಾಡ್, ನಾನು ಬದುಕಿದೆ. ಇದೊಂದು ತೀರಾ ಭಯಾನಕ ಅನುಭವ ಆಗಿತ್ತು, ನಾನು ಮೇಲೆ ಬಂದೆ’ ಎಂದು ಹೇಳಿದ್ದಾರೆ.

ಮೋರ್ಕಾ ಗುಹೆ ಜಗತ್ತಿನಲ್ಲೇ ತುಂಬಾ ಆಳವಾದ ಗುಹೆಯಾಗಿದ್ದು, ಗರಿಷ್ಠ 4,186 ಅಡಿ ಆಳವಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.