ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿರುವ ಹೈಕಮೀಷನರ್ ಹಿಂದಕ್ಕೆ ಕರೆಸಿದ ಬಾಂಗ್ಲಾದೇಶ

Published : 3 ಅಕ್ಟೋಬರ್ 2024, 13:09 IST
Last Updated : 3 ಅಕ್ಟೋಬರ್ 2024, 13:09 IST
ಫಾಲೋ ಮಾಡಿ
Comments

ಢಾಕಾ: ನವದೆಹಲಿಯಲ್ಲಿದ್ದ ಬಾಂಗ್ಲಾದೇಶದ ಹೈಕಮೀಷನರ್‌ ಸೇರಿದಂತೆ ಐದು ಮಂದಿ ಹೈಕಮೀಷನರ್‌ಗಳನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹಿಂದಕ್ಕೆ ಕರೆಸಿಕೊಂಡಿದ್ದು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಎರಡನೇ ಬಾರಿ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. 

ಭಾರತದಲ್ಲಿರುವ ಬಾಂಗ್ಲಾದೇಶದ ಹೈಕಮೀಷನರ್‌, ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್‌, ಆಸ್ಟ್ರೇಲಿಯಾ ರಾಜಧಾನಿಯ ಕ್ಯಾನ್‌ಬೆರಾ, ಪೋರ್ಚುಗಲ್‌ನ ರಾಜಧಾನಿ ಲಿಸ್ಬನ್‌, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಶಾಶ್ವತ ಪ್ರತಿನಿಧಿಗೆ ಢಾಕಾಕ್ಕೆ ಹಿಂತಿರುಗುವಂತೆ ಪ್ರೊ. ಮೊಹಮ್ಮದ್‌ ಯೂನೂಸ್‌ ನೇತೃತ್ವದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರು ಸೂಚನೆ ನೀಡಿದ್ದಾರೆ. ತಕ್ಷಣವೇ ವಿದೇಶಾಂಗ ಇಲಾಖೆಗೆ ಈ ಕುರಿತು ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

‘ಭಾರತದಲ್ಲಿದ್ದ ಹೈ ಕಮೀಷನರ್‌ ಮುಸ್ತಾಫಿಜುರ್‌ ರೆಹಮಾನ್‌ ಅವರಿಗೆ ತಕ್ಷಣ ಢಾಕಾದಲ್ಲಿರುವ ವಿದೇಶಾಂಗ ಇಲಾಖೆಗೆ ಬಂದು ವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ’ ಎಂದು ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಲಂಡನ್‌ನಲ್ಲಿದ್ದ ಬಾಂಗ್ಲಾದೇಶ ಹೈಕಮೀಷನರ್‌ ಸಾದಿಯಾ ಮುನಾ ತಸ್ನೀಂ ಅವರಿಗೆ ಸ್ವದೇಶಕ್ಕೆ ಹಿಂತಿರುಗುವಂತೆ ನಾಲ್ಕು ದಿನಗಳ ಹಿಂದೆ ಸೂಚನೆ ನೀಡಲಾಗಿತ್ತು.

ಆ.5ರಂದು ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಗೊಳಿಸಿದ ಬಳಿಕ, 8ರಂದು ಮಧ್ಯಂತರ ಸರ್ಕಾರ ರಚನೆಯಾಗಿದ್ದು, ವಿದೇಶಾಂಗ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಹೊಸ ಸರ್ಕಾರ ಬಂದ ಕೂಡಲೇ, ಅಮೆರಿಕ, ರಷ್ಯಾ, ಜರ್ಮನಿ, ಜಪಾನ್‌, ಸಂಯುಕ್ತ ಅರಬ್‌ ಒಕ್ಕೂಟ, ಸೌದಿ ಅರೇಬಿಯಾ, ಮಾಲ್ಡೀವ್ಸ್‌ನ ಹೈ ಕಮೀಷನರ್‌ಗಳನ್ನು ಬಾಂಗ್ಲಾದೇಶ ಹಿಂದಕ್ಕೆ ಕರೆಸಿಕೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT