ಬರ್ಲಿನ್: ಜರ್ಮನಿಯ ಸಮಾಧಿಯೊಂದರಲ್ಲಿ ಬರೋಬ್ಬರಿ 3,000 ವರ್ಷಗಳ ಹಿಂದಿನ ಖಡ್ಗ ದೊರಕಿರುವ ಸಂಗತಿ ಬೆಳಕಿಗೆ ಬಂದಿದೆ.

ಜರ್ಮನಿಯ ದಕ್ಷಿಣದ ನಾರ್ಡ್‌ಲಿಂಗೆನ್ ಎಂಬ ಪಟ್ಟಣದ ಬಳಿ ಪತ್ತೆಯಾಗಿರುವ ಈ ಖಡ್ಗ ಅತ್ಯಂತ ಸುಸ್ಥಿತಿಯಲ್ಲಿತ್ತು ಹಾಗೂ ಹಿತ್ತಾಳೆ ಯುಗದ್ದು ಎಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿರುವುದಾಗಿ ಬಿಬಿಸಿ ಮಾಹಿತಿ ಆಧರಿಸಿ ಸುದ್ದಿಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

‘ಉತ್ಖನನ ನಡೆಸುವ ಸಂದರ್ಭದಲ್ಲಿ ಸಿಕ್ಕಿರುವ ಈ ಖಡ್ಗ, ಕ್ರಿ.ಪೂ 14 ನೇ ಶತಮಾನಕ್ಕೆ ಸೇರಿದೆ. ಇನ್ನೂ ಫಳಫಳನೆ ಹೊಳೆಯುತ್ತಿದೆ’ ಎಂದು ಜರ್ಮನಿಯ ಪ್ರಾಚೀನ ಸ್ಮಾರಕ ಸಂರಕ್ಷಣಾ ಕೇಂದ್ರವಾಗಿರುವ ಬವಾರಿಯಾಸ್ ಸ್ಟೇಟ್ ಆಫೀಸ್ ತಿಳಿಸಿದೆ.

‘ಸಮಾಧಿಯಲ್ಲಿ ಪುರುಷ, ಮಹಿಳೆ ಹಾಗೂ ಮಕ್ಕಳ ಅಸ್ಥಿಪಂಜರಗಳು ದೊರಕಿವೆ. ಅವುಗಳ ಜೊತೆ ಖಡ್ಗ ಸಿಕ್ಕಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗುವುದು’ ಎಂದು ಹೇಳಿದೆ.

‘ಈ ಖಡ್ಗ ನೋಡಿದರೆ ತುಂಬಾ ಆಶ್ಚರ್ಯವಾಗುತ್ತಿದೆ, ಏಕೆಂದರೆ, ಈ ಆಧುನಿಕ ಕಾಲದಲ್ಲಿಯೂ ಇಷ್ಟೊಂದು ಗಟ್ಟಿಯಾದ ಹಾಗೂ ಅತ್ಯಂತ ನಿಖರವಾದ ಖಡ್ಗ ಸಿಗುವುದು ಅಪರೂಪ. ಇದನ್ನು ಆಯುಧವಾಗಿ ಬಳಸುತ್ತಿದ್ದರು’ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಬವಾರಿಯಾಸ್ ಸ್ಟೇಟ್ ಆಫೀಸ್ ಮುಖ್ಯಸ್ಥ ಮ್ಯಾಥೂಸ್ ಪಿಫೇಯಿಲ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.