ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್‌ ಚುನಾವಣೆ | ಲೇಬರ್‌ ಪಾರ್ಟಿಗೆ ಜಯದ ವಿಶ್ವಾಸ; ಸುನಕ್‌ಗೆ ಹಿನ್ನಡೆ?

ಕರ್ನರ್ವೇಟಿವ್ ಪಾರ್ಟಿಗೆ ಆಡಳಿತ ವಿರೋಧಿ ಅಲೆಯ ಭೀತಿ; ರಿಷಿ ಸುನಕ್‌ಗೆ ಹಿನ್ನಡೆ?
Published 4 ಜುಲೈ 2024, 20:41 IST
Last Updated 4 ಜುಲೈ 2024, 20:41 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಸಂಸತ್ತಿಗೆ ಗುರುವಾರ ಸಾರ್ವತ್ರಿಕ ಚುನಾವಣೆ ನಡೆದಿದ್ದು, 14 ವರ್ಷಗಳ ಬಳಿಕ ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸವನ್ನು ವಿರೋಧಪಕ್ಷವಾದ ಲೇಬರ್ ಪಾರ್ಟಿ ವ್ಯಕ್ತಪಡಿಸಿದೆ.

ಇನ್ನೂ ಆರು ತಿಂಗಳು ಅಧಿಕಾರವಧಿ ಇದ್ದರೂ ಅವಧಿಪೂರ್ವ ಚುನಾವಣೆಗೆ ಹೋಗುವ ಮೂಲಕ ರಿಷಿ ಸುನಕ್ ಅಚ್ಚರಿ ಮೂಡಿಸಿದ್ದರು. ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ವಿರೋಧಪಕ್ಷ ಲೇಬರ್ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಆಡಳಿತ ವಿರೋಧಿ ಅಲೆಯ ಭೀತಿಯಲ್ಲಿರುವ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಈ ಚುನಾವಣೆ ಮೂಲಕ ಭಾರತ ಮೂಲದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ರಾಜಕೀಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT