ಕ್ಯಾನ್ಬೆರಾ: ಚೀನಾದೊಂದಿಗೆ ಆಸ್ಟ್ರೇಲಿಯಾದ ರಾಜ್ಯ ಸರ್ಕಾರವೊಂದು ಮಾಡಿಕೊಂಡಿದ್ದ ಮೂಲಸೌಲಭ್ಯ ಅಭಿವೃದ್ಧಿ ಒಪ್ಪಂದಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಆಸ್ಟ್ರೇಲಿಯಾ ಸರ್ಕಾರ ರದ್ದುಗೊಳಿಸಿದೆ. ಇದಕ್ಕೆ ಚೀನಾದಿಂದ ತೀವ್ರ ಆಕ್ಷೇಪವೂ ವ್ಯಕ್ರವಾಗಿದೆ.

ವಿಕ್ಟೋರಿಯಾ ರಾಜ್ಯವು ಚೀನಾದೊಂದಿಗೆ ‘ಬೆಲ್ಟ್ ಆ್ಯಂಡ್ ರೋಡ್‘ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗೆ 2018 ಮತ್ತು 2019ರಲ್ಲಿ ಸಹಿ ಹಾಕಿತ್ತು. ಅದೇ ರಾಜ್ಯದ ಶಿಕ್ಷಣ ಇಲಾಖೆಯು 1999ರಲ್ಲಿ ಸಿರಿಯಾ ಮತ್ತು 2004ರಲ್ಲಿ ಇರಾನ್ ಜತೆಗೂ ಒಪ್ಪಂದ ಮಾಡಿಕೊಂಡಿತ್ತು.

ಈ ನಾಲ್ಕೂ ಒಪ್ಪಂದಗಳು ಹೊಸ ಕಾನೂನುಗಳ ಅಡಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಭಂಗ ತರುತ್ತವೆ ಎಂಬ ನೆಲೆಯಲ್ಲಿ ಅವುಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಆಸ್ಟ್ರೇಲಿಯಾ ಸರ್ಕಾರ ಬಂದಿದೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೈನೆ ತಿಳಿಸಿದ್ದಾರೆ.

ಹಾಂಕಾಂಗ್– ಭಾರತ ವಿಮಾನಗಳ ಹಾರಾಟ ರದ್ದು

ಈ ನಿರ್ಧಾರಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದಲ್ಲಿರುವ ಚೀನಾದ ರಾಯಭಾರ ಕಚೇರಿ, ಚೀನಾ–ಆಸ್ಟ್ರೇಲಿಯಾ ಸಂಬಂಧ ಸುಧಾರಣೆಗೆ ಅಸ್ಟ್ರೇಲಿಯಾ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದೆ.

ಚೀನಾ ರಾಯಭಾರಿ ತಂಗಿದ್ದ ಪಾಕಿಸ್ತಾನದ ಹೋಟೆಲ್ನಲ್ಲಿ ಬಾಂಬ್ ಸ್ಫೋಟ: ನಾಲ್ವರ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.