ವಿಯೆನ್ನಾ, ಆಸ್ಟ್ರಿಯಾ: ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾ ರಾಜಧಾನಿ ವಿಯೆನ್ನಾಗೆ ಮಂಗಳವಾರ ತಡರಾತ್ರಿ ಬಂದಿಳಿದರು.

ರಷ್ಯಾ ಪ್ರವಾಸ ಮುಗಿಸಿ ಅವರು ಅಸ್ಟ್ರೀಯಾ ಪ್ರವಾಸ ಕೈಗೊಂಡಿದ್ದಾರೆ.

ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೇಹ್ಮರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಭಾರತೀಯರು ಅಲ್ಲಿ ಹಾಜರಿದ್ದರು.

40 ವರ್ಷಗಳ ನಂತರ ಭಾರತದ ಪ್ರಧಾನಿ ಆಸ್ಟ್ರಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಅವರು ಕೊನೆಯ ಬಾರಿ ಭೇಟಿ ನೀಡಿದ್ದರು.

ಈ ಎರಡು ದಿನಗಳ ಪ್ರವಾಸದಲ್ಲಿ ಮೋದಿ ಅವರು ಹಲವು ಮಹತ್ವದ ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.

ಅಲ್ಲದೇ ಮೋದಿ ಅವರು ಬುಧವಾರ ಆಸ್ಟ್ರಿಯಾದಲ್ಲಿನ ಭಾರತ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಅಧ್ಯಕ್ಷ ಅಲೆಗ್ಸಾಂಡರ್ ವ್ಯಾನ್ ಅವರನ್ನು ಭೇಟಿಯಾಗಲಿದ್ದಾರೆ.

ವಿಶೇಷವೆಂದರೆ ಕಾರ್ಲ್ ನೇಹ್ಮರ್ ಅವರು ಮೋದಿ ಅವರನ್ನು ತಮ್ಮ ಖಾಸಗಿ ಸಮಾರಂಭವೊಂದಕ್ಕೆ ಆಹ್ವಾನಿಸಿದ್ದಾರೆ. ಇದರಲ್ಲಿ ಪ್ರಧಾನಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

ಎಕ್ಸ್ ತಾಣದಲ್ಲಿ ಅಸ್ಟ್ರೀಯಾ ಚಾನ್ಸಲರ್ ಅವರನ್ನು ಭೇಟಿಯಾಗಿದ್ದರ ಬಗ್ಗೆ ಸಂಭ್ರಮ ವ್ಯಕ್ತಪಡಿಸಿ ಮಾಹಿತಿ ಹಂಚಿಕೊಂಡಿರುವ ಮೋದಿ ಅವರು, ಜಾಗತಿಕವಾಗಿ ಉತ್ತಮವಾದದ್ದನ್ನು ಸಾಧಿಸಲು ಉಭಯ ದೇಶಗಳು ಶಕ್ತಿಮೀರಿ ಶ್ರಮಿಸಲಿವೆ ಎಂದು ಹೇಳಿಕೊಂಡಿದ್ದಾರೆ.
.ಗಾಜಾ ಪಟ್ಟಿ | ನಿರಾಶ್ರಿತರಿದ್ದ ಶಾಲೆ ಮೇಲೆ ಇಸ್ರೇಲ್ ವಾಯುದಾಳಿ: ಕನಿಷ್ಠ 25 ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.