ವಾಷಿಂಗ್ಟನ್/ ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವ ಬಲೂಚಿಸ್ತಾನ ಲಿಬರೇಷನ್ ಆರ್ಮಿಯನ್ನು (ಬಿಎಲ್ಎ) ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿದೆ.

ಈ ಸಂಘಟನೆಯು ಬಲೂಚಿಸ್ತಾನದಲ್ಲಿ ಹಲವು ಭಯೋತ್ಪಾದನಾ ದಾಳಿಗಳನ್ನು ನಡೆಸಿತ್ತು. ಪಾಕಿಸ್ತಾನವು ಈ ಹಿಂದೆಯೇ ಬಿಎಲ್ಎಯನ್ನು ಉಗ್ರ ಸಂಘಟನೆಯ ಪಟ್ಟಿಗೆ ಸೇರಿಸಿತ್ತು. ಅಮೆರಿಕ ಕೂಡ ಇದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿತ್ತು.

’ಈ ಸಶಸ್ತ್ರ ಪ್ರತ್ಯೇಕತಾವಾದಿಗಳ ಗುಂಪು, ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ನಾಗರಿಕರನ್ನು
ಹಾಗೂ ಭದ್ರತಾಪಡೆಯ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿತ್ತು‘ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

ಅಮೆರಿಕದಲ್ಲಿ ಬಿಎಲ್ಎ ಉಗ್ರರಿಗೆ ಯಾರಾದರೂ ಸಹಕಾರ ನೀಡಿದರೆ ಅದು ಅಪರಾಧವಾಗುತ್ತದೆ ಎಂದೂ ಹೇಳಿದೆ.

ಕರಾಚಿಯಲ್ಲಿರುವ ಚೀನಾದ ಕಾನ್ಸುಲೇಟ್ ಕಚೇರಿ ಮೇಲೆ ಕಳೆದ ನವೆಂಬರ್ನಲ್ಲಿ ಬಿಎಲ್ಎ ಉಗ್ರರು ದಾಳಿ ನಡೆಸಿದ್ದಾರೆ. ಮೇ ತಿಂಗಳಲ್ಲಿ ಗ್ವಾದರ್ನ ಪಂಚತಾರಾ ಹೋಟೆಲ್ಗೆ ನುಗ್ಗಿ ಐವರನ್ನು ಹತ್ಯೆ ಮಾಡಿದ್ದ ಉಗ್ರರು ಕೂಡ ಇದೇ ಸಂಘಟನೆಗೆ ಸೇರಿದವರು ಎಂದು ತಿಳಿಸಿದೆ.

ಅಮೆರಿಕವು ಬಿಎಲ್ಎಗೆ ಉಗ್ರ ಸಂಘಟನೆಯ ಪಟ್ಟ ನೀಡಿರುವುದನ್ನು ಪಾಕಿಸ್ತಾನ ಸ್ವಾಗತಿಸಿದೆ.

ಇದರಿಂದ ಈ ಸಂಘಟನೆಯ ಕಾರ್ಯಚಟುವಟಿಕೆಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.