ದುಬೈ: ಪೊಲೀಸ್ ಗಸ್ತು ವಾಹನಗಳನ್ನು ಗುರಿಯಾಗಿಸಿ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 10 ಮಂದಿ ಅಧಿಕಾರಿಗಳು ಮೃತಪಟ್ಟಿದ್ದಾರೆ.

ರಾಜಧಾನಿಯಿಂದ 1200 ಕಿ.ಮೀ. ದೂರದ ಗೊಹರ್ ಕುಹ್ ಬಳಿ ಕೃತ್ಯ ನಡೆದಿದೆ. ಅಧಿಕೃತ ಟಿ.ವಿ ಮಾಧ್ಯಮವು 10 ಅಧಿಕಾರಿಗಳು ಸತ್ತಿದ್ದಾರೆ ಎಂದು ದೃಢಪಡಿಸಿದೆ.

ಅಫ್ಗಾನಿಸ್ತಾನ, ಇರಾನ್, ಪಾಕಿಸ್ತಾನ ಮೂಲದ ಬಲೂಚ್ ಸಮುದಾಯದ ಜನರ ಸಂಘಟನೆಯಾಗಿರುವ ಹಾಲ್ವಶ್ ಈ ದಾಳಿಗೆ ಸಂಬಂಧಿಸಿದ ಚಿತ್ರ, ವಿಡಿಯೊ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದೆ.

ಎರಡು ವಾಹನ ಗುರಿಯಾಗಿಸಿ ದಾಳಿ ನಡೆದಿದೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವ ಇಸ್ಕಂದರ್ ಮೊಮೆನಿ ತಿಳಿಸಿದ್ದಾರೆ. ಕೃತ್ಯದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ, ಯಾರ ಮೇಲೂ ಶಂಕೆಯೂ ವ್ಯಕ್ತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.