ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಸೀನಾಗೆ ಆಶ್ರಯ ನೀಡಿದ ಭಾರತದ ಬಗ್ಗೆ ಬಾಂಗ್ಲನ್ನರು ಬೇಸರವಾಗಿದ್ದಾರೆ: BNP ನಾಯಕ

Published : 23 ಆಗಸ್ಟ್ 2024, 7:20 IST
Last Updated : 23 ಆಗಸ್ಟ್ 2024, 7:20 IST
ಫಾಲೋ ಮಾಡಿ
Comments

ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ನಡೆಗೆ ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ, ಬದಲಾಗಿ ಬೇಸರಗೊಂಡಿದ್ದಾರೆ ಎಂದು ‘ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ’ಯ ನಾಯಕರೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಬಾಂಗ್ಲಾದೇಶದ ವಾಸ್ತವ ಸ್ಥಿತಿಯನ್ನು ಗಮನಿಸಿ ತಮ್ಮ ನೀತಿಯನ್ನು ಮರುಪರಿಶೀಲನೆ ಮಾಡಿ ಎಂದು ಭಾರತದ ರಾಜಕಾರಣಿ ಹಾಗೂ ಭದ್ರತಾ ತಂತ್ರಜ್ಞರಿಗೆ ಅವರು ಮನವಿ ಮಾಡಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಬಾಂಗ್ಲಾದೇಶದ ಮಾಜಿ ಸಚಿವ ಅಬ್ದುಲ್ ಮೊಯಿನ್ ಖಾನ್‌, ‘ಬಾಂಗ್ಲಾದೇಶವು ಮೂರು ಬದಿಯಲ್ಲಿ ಭಾರತದೊಂದಿಗೆ ಗಡಿ ಹಂಚಿಕೊಂಡ ದೊಡ್ಡ ನೆರೆಯ ರಾಷ್ಟ್ರ. ಹೀಗಾಗಿ ಭಾರತ ಒಳ್ಳೆಯ ಸ್ನೇಹಿತ ಆಗದೇ ಇರಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಹಸೀನಾ ಭಾರತದಲ್ಲಿ ಇರುವ ಕಾರಣ ಉಭಯ ದೇಶಗಳ ಬಾಂಧವ್ಯದ ಪಥವನ್ನು ಹೇಗೆ ನೋಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಭಾರತ ಹೇಗೆ ನಿರ್ಧರಿಸುತ್ತದೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ’ ಎಂದು ನುಡಿದಿದ್ದಾರೆ.

ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಹಸೀನಾ ಭಾರತದಲ್ಲಿ ಉಳಿದುಕೊಂಡಾಗ, ‘ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ. ಆದರೆ ಅವರು ನೊಂದಿದ್ದಾರೆ, ಗಾಯಗೊಂಡಿದ್ದಾರೆ. ಭಾರತದಿಂದ ಈ ನಡೆ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ.

ಅವಾಮಿ ಲೀಗ್ ಮತ್ತು ಹಸೀನಾ ಅವರ ಬಗೆಗಿನ ಭಾರತದ ನಡವಳಿಕೆಯು ‘ನಿಜವಾದ ಅರ್ಥದಲ್ಲಿ ಭಾರತೀಯ ವಿರೋಧಿ ಭಾವನೆಯಾಗಿ ರೂಪಾಂತರಗೊಂಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT