ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸಾಲ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಬಿಬಿಸಿ ಅಧ್ಯಕ್ಷ ರಿಚರ್ಡ್ ಶಾರ್ಪ್ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಾರ್ವಜನಿಕ ನೇಮಕಾತಿಗಳ ಆಯುಕ್ತ ಬ್ಯಾರಿಸ್ಟರ್ ಆ್ಯಡಮ್ ಹೆಪ್ಪಿನ್ಸ್ಟಾಲ್ ಅವರನ್ನು ನೇಮಿಸಲಾಗಿತ್ತು. ರಿಚರ್ಡ್ ಅವರು ಬೋರಿಸ್ ಜಾನ್ಸನ್ ಅವರಿಗೆ ಸಾಲವನ್ನು ಕೊಡಿಸಲು ಕೇಳಿ ಬಂದಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ರಿಚರ್ಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಸಿ ಮಂಡಳಿ, ರಿಚರ್ಡ್ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರು ಅತ್ಯಂತ ಪರಿಣಾಮಕಾರಿ ಅಧ್ಯಕ್ಷರಾಗಿದ್ದರು ಎಂದು ಹೇಳಿದೆ.

ಮುಂದಿನ ಅಧ್ಯಕ್ಷರ ನೇಮಕವಾಗುವವರೆಗೆ ರಿಚರ್ಡ್ ಅವರು ಜೂನ್ ಅಂತ್ಯದವರೆಗೆ ಅಧಿಕಾರದಲ್ಲಿರುತ್ತಾರೆ ಎಂದು ಬಿಬಿಸಿ ತಿಳಿಸಿದೆ. ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೆಷನ್ (ಬಿಬಿಸಿ) ಎಂಬುದು ಬ್ರಿಟನ್ನ ಸಾರ್ವಜನಿಕ ಸ್ವಾಮ್ಯದ ಒಂದು ಮಾಧ್ಯಮ ಸಂಸ್ಥೆಯಾಗಿದೆ.

ಮಾಜಿ ಬ್ಯಾಂಕರ್ ಆಗಿರುವ ರಿಚರ್ಡ್ ಅವರು ಫೆಬ್ರುವರಿ 10, 2021 ರಂದು ಬಿಬಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.