ಅಬುಧಾಬಿ: ಬೆಂಗಳೂರಿನ ನಿವಾಸಿ ಅರುಣ್ ಕುಮಾರ್ ವಾಟಕ್ಕೆ ಕೊರೊತ್ ಅವರಿಗೆ ಇಲ್ಲಿನ ‘ಬಿಗ್ ಟಿಕೆಟ್’ ನಡೆಸುವ ಲಾಟರಿಯಲ್ಲಿ ಅದೃಷ್ಟ ಒಲಿದಿದೆ. ಆನ್ಲೈನ್ ಮೂಲಕ ಟಿಕೆಟ್ ಖರೀದಿಸಿದ್ದ ಅವರು ₹ 44 ಕೋಟಿ (20 ದಶಲಕ್ಷ ದಿರ್ಹಂ) ಗೆದ್ದುಕೊಂಡಿದ್ದಾರೆ.

‘ಬಿಗ್ ಟಿಕೆಟ್’ ನೇರ ಪ್ರಸಾರದ ಡ್ರಾನಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುತ್ತದೆ. ಗೆಳೆಯರ ಮೂಲಕ ಲಾಟರಿ ಕುರಿತು ತಿಳಿದುಕೊಂಡಿದ್ದ ಅವರು ಅದೃಷ್ಟ ಪರೀಕ್ಷಿಸಲು ಆನ್ಲೈನ್ನಲ್ಲಿ ಮಾರ್ಚ್ 22ರಂದು ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ‘ಗಲ್ಫ್ನ್ಯೂಸ್’ ವರದಿ ಮಾಡಿದೆ.

‘ಬಿಗ್ ಟಿಕೆಟ್’ ಪ್ರತಿನಿಧಿಗಳು ಮೊದಲಿಗೆ ಬಹುಮಾನ ಗೆದ್ದಿರುವುದರ ಮಾಹಿತಿ ನೀಡಿದಾಗ ಅರುಣ್ ನಂಬಿರಲಿಲ್ಲ. ಆದರೆ, ಪ್ರತಿನಿಧಿಗಳು ಲಾಟರಿಯಲ್ಲಿ ₹ 44,75,67,571 ಬಹುಮಾನ ಬಂದಿರುವುದನ್ನು ಮನದಟ್ಟು ಮಾಡಿದಾಗ ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ.

‘ನನ್ನ ಕನಸು ನಿಜವಾಗಿದೆ. ಬಹುಮಾನದ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತೇನೆ. ಸ್ವಂತ ಉದ್ದಿಮೆ ಆರಂಭಿಸುತ್ತೇನೆ ಎಂದು ಅರುಣ್ ಪ್ರತಿಕ್ರಿಯಿಸಿದ್ದಾರೆ’ ಎಂದು ‘ಗಲ್ಫ್ನ್ಯೂಸ್’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.