ವಾಷಿಂಗ್ಟನ್ (ಎಪಿ): ‘ಪ್ರೈಡ್ ಮಂತ್ (ಹೆಮ್ಮೆಯ ಮಾಸ)’ ಆಚರಿಸಲು ಗಾಯಕಿ ಬ್ರೆಟ್ಟಿ ವೊ ಜತೆ ಸಾವಿರಕ್ಕೂ ಹೆಚ್ಚು ಮಂದಿ ಎಲ್‌ಜಿಬಿಟಿಕ್ಯೂ ಸಮುದಾಯದ ಸದಸ್ಯರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತ ಭವನಕ್ಕೆ ಆಹ್ವಾನ ನೀಡಿದ್ದಾರೆ.

‘ಎಲ್ ಜಿಬಿಟಿಕ್ಯೂ+ ಸಮುದಾಯಗಳ ಮೇಲೆ ದಾಳಿಗಳು ನಡೆಯದಂತೆ ರಕ್ಷಣೆ ನೀಡಲು, ಯುವಜನರ ಮಾನಸಿಕ ಆರೋಗ್ಯಕ್ಕೆ ಸಂಪನ್ಮೂಲಗಳ ನೆರವು, ನಿರ್ವಸತಿಗರಿಗೆ ಸಹಾಯ ಹಾಗೂ ಪುಸ್ತಕಗಳ ಮೇಲೆ ನಿಷೇಧ ಹೇರುವುದನ್ನು ತಡೆಯಲು ಬೈಡನ್ ಅವರು ಹೊಸ ಉಪಕ್ರಮಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಆಕ್ರಮಣಕ್ಕೆ ಒಳಗಾದಂತಹ ಸಮುದಾಯಕ್ಕೆ ಹಿಂದೆಂದೂ ಕಾಣದಂತಹ ಅಪರಿಮಿತ ಬೆಂಬಲವನ್ನು ಈ ಸಮಯದಲ್ಲಿ ಸಮುದಾಯದ ಗಣ್ಯಾತಿಗಣ್ಯರ ಸಮಾಗಮ, ಸಂಗೀತ ತಾರೆಯರ ಕಾರ್ಯಕ್ರಮ ಪ್ರದರ್ಶನದ ಮೂಲಕ ಶ್ವೇತಭವನ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.