ಕಾಬೂಲ್ (ಎಪಿ): ಕಾಬೂಲ್ ಸೇನಾ ವಿಮಾನ ನಿಲ್ದಾಣವನ್ನು ಭಾನುವಾರ ನಡುಗಿಸಿದ ಬಾಂಬ್ ಸ್ಫೋಟದಲ್ಲಿ 10 ನಾಗರಿಕರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.

ಬಾಂಬ್ ಸ್ಫೋಟ ಮಿಲಿಟರಿ ವಿಮಾನ ನಿಲ್ದಾಣದ ಮುಖ್ಯ ದ್ವಾರದ ಹತ್ತಿರದಲ್ಲೇ ಸಂಭವಿಸಿದೆ ಎಂದು ತಾಲಿಬಾನ್ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಾಫೀ ಠಾಕೂರ್ ಹೇಳಿಕೆ ಉಲ್ಲೇಖಿಸಿ ‘ಖಾಮಾ ಪ್ರೆಸ್’ ವರದಿ ಮಾಡಿದೆ.

ದಾಳಿಯ ಹೊಣೆಯನ್ನು ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಉತ್ತರ ತಾಖರ್ ಪ್ರಾಂತ್ಯದ ರಾಜಧಾನಿ ತಾಲುಕನ್ ನಗರದಲ್ಲಿ ಕಳೆದ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದರು. ಈ ಘಟನೆ ನಡೆದು ಮೂರು ದಿನಗಳ ನಂತರ ಈ ಸ್ಫೋಟ ನಡೆದಿದೆ.

ಘಟನಾ ಸ್ಥಳದಲ್ಲಿ ಛಾಯಾಗ್ರಹಣ ಮತ್ತು ದೃಶ್ಯ ಚಿತ್ರೀಕರಣವನ್ನು ತಾಲಿಬಾನ್ ಭದ್ರತಾ ಪಡೆ ನಿರ್ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.