ಜಾಕ್ಸನ್: ಅಮೆರಿಕದ ಹಲವು ರಾಜ್ಯಗಳ ಸರ್ಕಾರಿ ಕಚೇರಿಗಳಿಗೆ ಗುರುವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕಚೇರಿಗಳನ್ನು ಖಾಲಿ ಮಾಡಲಾಗಿದೆ. ಬುಧವಾರವೂ ಹೀಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು.

ಮಿಸಿಸಿಪ್ಪಿ ಕ್ಯಾಪಿಟಲ್ ಭವನ (ರಾಜ್ಯದ ಶಾಸನ ಸಭೆಯ ಕಟ್ಟಡ) ಹಾಗೂ ಅರ್ಕಾನ್ಸಾಸ್, ಹವಾಯ್, ಮೈನೆ, ಮೊಂಟನಾ ಹಾಗೂ ನ್ಯೂ ಹೆಮಿಸ್ಪಿಯರ್‌ನ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ ಪೈಕಿ ಕೆಲವು ಕಚೇರಿಗಳಲ್ಲಿ ಶೋಧ ನಡೆಸಲಾಗಿದ್ದು, ಇನ್ನು ಕೆಲವು ಕಚೇರಿಗಳನ್ನು ಖಾಲಿ ಮಾಡಲಾಗಿದೆ. ಆದರೆ ತಕ್ಷಣಕ್ಕೆ ಯಾವುದೇ ಸ್ಫೋಟಕಗಳು ಪತ್ತೆಯಾಗದ ಕಾರಣ ಕಚೇರಿಗಳನ್ನು ಸಾರ್ವಜನಿಕ ಪ್ರವೇಶಕ್ಕೆ ಮತ್ತೆ ತೆರೆಯಲಾಗಿದೆ.
.ರಾಜಭವನಕ್ಕೆ ಬಾಂಬ್ ಬೆದರಿಕೆ: ಆರೋಪಿ ವಶಕ್ಕೆ .
ಬುಧವಾರ ಹಲವು ರಾಜ್ಯಗಳ ಕ್ಯಾಪಿಟಲ್ ಭವನಗಳಿಗೆ ಹುಸಿ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ಹೀಗಾಗಿ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ಇದಾದ ಮರುದಿನವೇ ಮತ್ತೆ ಬಾಂಬ್ ಬೆದರಿಕೆ ಬಂದಿದೆ.

ಜಾಕ್ಸನ್ ಹಾಗೂ ಮಿಸಿಸಿಪ್ಪಿಯಲ್ಲಿ ಕ್ಯಾಪಿಟಲ್ ಭವನದ ರಸ್ತೆಯಲ್ಲಿರುವ ರಾಜ್ಯ ಸುಪ್ರೀಂ ಕೋರ್ಟ್ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ ಪ್ರದೇಶದಲ್ಲಿದ್ದ ಜನರನ್ನು ಬೇರೆಡೆ ಸ್ಥಳಾಂತರಿಸುವ ಮುನ್ನ ಸ್ಥಳವನ್ನು ಬಾಂಬ್ ಪತ್ತೆ ಶ್ವಾನ ದಳ ಪರಿಶೀಲನೆ ನಡೆಸಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಅಫ್ ಇನ್‌ವೆಸ್ಟಿಗೇಷನ್ ಹೇಳಿದೆ.
.ಅಮೆರಿಕ: ಐಶಾರಾಮಿ ಬಂಗಲೆಯಲ್ಲಿ ಭಾರತೀಯ ಮೂಲದ ದಂಪತಿ, ಪುತ್ರಿ ಶವ ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.